
ಬೆಳಗಾವಿ
ನಕಲಿ ಕಂಪನಿ ಸೃಷ್ಟಿಸಿ ನಕಲಿ ಬ್ಯಾಂಕ್ ಅಕೌಂಟ್ ಸೃಷ್ಟಿಸಿ ಸೈಬರ್ ವಂಚನೆ ಮಾಡಿದ ಬೆಳಗಾವಿ ನಗರದ ಮೂವರು ಆರೋಪಿಗಳನ್ನು ಚೆನ್ನೈ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ನಡೆದಿದೆ.
ತಮಿಳುನಾಡು ಪೊಲೀಸ್ ಇಲಾಖೆಯ ಸೂಚನೆ ಮೆರೆಗೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ ಚೆನ್ನೈ ಪೊಲೀಸರ ತಂಡ ಅನಿಲ್ ಕೊಲ್ಲಾಪುರ, ರೋಹನ್ ಕಾಂಬಳೆ ಹಾಗೂ ಸರ್ವೆಶ್ ಕಿವಿ ಎಂಬ ಆರೋಪಗಳನ್ನು ಬೆಳಗಾವಿ ಮೂರನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಚೆನ್ನೈಗೆ ಕರೆದುಕೊಂಡು ಹೋದರು.
ಬಂಧಿತ ಆರೋಪಿಗಳು ನಕಲಿ ಕಂಪನಿ ಸೃಷ್ಟಿ ಮಾಡಿ ಬ್ಯಾಂಕ್ ಖಾತೆ ತೆರೆದು ಹಣ ದುರ್ಬಳಕೆ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದರು. ಇವರು ಮಾಡಿದ ಖಾತೆಯಲ್ಲಿ 27 ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಖಿಲಾಡಿಗಳು ಬೆಂಗಳೂರು ಹಾಗೂ ತುಮಕೂರಿನಲ್ಲಿ ವಂಚನೆ ಮಾಡಿ ಪೊಲೀಸ್ ಇಲಾಖೆಗೆ ಮೋಸ ಮಾಡಿದ್ದಾರೆ.
ಸೈಬರ್ ಕ್ರೈಮ್ ಬಗ್ಗೆ ಜನರು ಇಂಟರ್ನೆಟ್ ಮೂಲಕ ಬರುವ ಲಿಂಕ್ ನೇರವಾಗಿ ಓಪನ್ ಮಾಡಬಾರದು. ಅಲ್ಲಿ ಜನರು ತಮ್ಮ ದಾಖಲೆಗಳನ್ನು ನೀಡಿದರೆ ನಿಮ್ಮ ಹಣನ್ನು ವಂಚನೆ ಮಾಡುವ ಸಾಧ್ಯತೆ ಇರುತ್ತದೆ. ಜನರು ಜಾಗರೂಕತೆಯಿಂದ ಇರಬೇಕಾಗುತ್ತದೆ. ಇಲ್ಲದಿದ್ದರೆ ಇಂಥ ಖಿಲಾಡಿಗಳು ನಿಮ್ಮಗೂ ಮೋಸ ಮಾಡಬಹುದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
