
ಬೆಳಗಾವಿ
ಪತ್ನಿ, ಅಳಿಯನ ಎದುರೇ ಕತ್ತು ಕೊಯ್ದುಕೊಂಡು ಪತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಡೆದಿದೆ.
ಮಲ್ಲಪ್ಪ ಕಟಬುಗೋಳ(35) ತನ್ನ ಕತ್ತ ತಾನೇ ಕೊಯ್ದುಕೊಂಡ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಿನ್ನೆ ದಿನ ಮನೆಯಲ್ಲಿದ್ದ ಅಕ್ಕಿ ಮಾರಿ ಸಾರಾಯಿ ಕುಡಿದು ಬಂದು ಗಂಡ ಗಲಾಟೆ ನಡೆದಿದೆ. ರಾತ್ರಿಯಿಡೀ ಹೆಂಡತಿ ರೇಖಾ ಜೊತೆಗೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾನೆ.
ಸಹೋದರನ ಕರೆಯಿಸಿ ಬುದ್ದಿ ಹೇಳಿಸಿದ್ದ ಪತ್ನಿ. ಈ ವೇಳೆ ಅಳಿಯ ಮಲ್ಲಿಕಾರ್ಜುನ ನಿಂದ ಮಾವನ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡುತ್ತಿದ್ದಂತೆ ಮನೆಯಲ್ಲಿದ್ದ ಕುಡಗೋಲು ಹಿಡಿದು ಸಾಯುವ ಬೆದರಿಕೆ ಹಾಕಿದ್ದ.
ನೀನು ಸತ್ರೆ ಅಕ್ಕ ಚೆನ್ನಾಗಿ ಇರುತ್ತಾಳೆ ಎಂದ ಅಳಿಯ ಮಲ್ಲಿಕಾರ್ಜುನ. ಹೀಗೆ ಹೇಳುತ್ತಿದ್ದಂತೆ ಕ್ಷಣಾರ್ಧದಲ್ಲೇ ಕತ್ತು ಕೊಯ್ದುಕೊಂಡು ತೀವ್ರ ರಕ್ತಸ್ರಾವವಾಗಿ ಮಲ್ಲಪ್ಪ ಮೃತಪಟ್ಟಿದ್ದಾನೆ. ಮಲ್ಲಪ್ಪ ಸಾಯುತ್ತಿದ್ದಂತೆ ಅಳಿಯ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಿಕೊಂಡು ಪೊಲೀಸರ ತನಿಖೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಸ್ಥಳಾಂತರಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅಳಿಯ ಮಲ್ಲಿಕಾರ್ಜುನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
