
ಬೆಳಗಾವಿ
ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಒಂದಾದ ವಿಟಿಯು ಆನ್ಲೈನ್ ಸಭೆಯಲ್ಲಿ ಅಶ್ಲೀಲ್ ವಿಡಿಯೋ ಪ್ಲೆ ಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆನ್ಲೈನ್ ಮೀಟಿಂಗ್ ನಲ್ಲೇ ಶುರುವಾಯ್ತು ಪೋರ್ನ್ ವಿಡಿಯೋ ಪ್ಲೆಯಾಗಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದಲೇ ಮಹಾ ಎಡವಟ್ಟು ಮಾಡಿಕೊಂಡಿದೆ.
ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ವಿಟಿಯು ಮೀಟಿಂಗ್ ವೇಳೆ ನಡೆದ ಘಟನೆ ಇದಾಗಿದೆ.
ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಗಳಿಗೆ ಮೀಟಿಂಗ್ ಕರೆದ ಕುಲಪತಿ ಆನ್ಲೈನ್ ಗೂಗಲ್ ಮೀಟ್ ಮೂಲಕ ರಾಜ್ಯದ ಎಲ್ಲಾ ಪ್ರಾಂಶುಪಾಲರು ಭಾಗಿಯಾಗಿದ್ದರು.
ಮೀಟಿಂಗ್ ನಲ್ಲಿಯೇ ಅಸ್ಲಿಲ್ ವಿಡಿಯೋ ಪ್ರಾರಂಭವಾಗಿದೆ. ಆನೈಲೈನ್ ಮೀಟಿಂಗ್ ಬಗ್ಗೆ ಜಾಗೃತಿ ವಹಿಸದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಕನಿಷ್ಠ ಗುಪ್ತಿಕರಣ ವಹಿಸದ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆನ್ಲೈನ್ ಇಂಟರ್ನಶಿಪ್ ಮೀಟಿಂಗ್ ನಲ್ಲೇ ಶುರುವಾದ ಅಸ್ಲಿಲ್ ವಿಡಿಯೋ ಮುಜುಗರಕ್ಕೀಡಾದ ಎಲ್ಲ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು. ತೀವ್ರ ಟೀಕೆಗೆ ಒಳಗಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಡೆಗೆ ವಿದ್ಯಾರ್ಥಿಗಳು ಸಹ ಮುಜುಗರ ಪಡುವಂತಾಗಿದೆ.
