ಹುಬ್ಬಳ್ಳಿಯಲ್ಲಿ ‘ವಾಕ್ ಫಾರ್ ಹೋಪ್’
ಹುಬ್ಬಳ್ಳಿ, ಜುಲೈ 27 : ಈ ವಿಶ್ವ ಐವಿಎಫ್ ದಿನದಂದು, ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ, ಬಂಜೆತನವನ್ನು ಎದುರಿಸುತ್ತಿರುವವರಲ್ಲಿ ಭರವಸೆ, ಜಾಗೃತಿ ಮತ್ತು ಸಾಮುದಾಯಿಕ ಬೆಂಬಲವನ್ನು ಸೂಚಿಸಲು ವಾಕಥಾನ್ ಅನ್ನು ಅಯೋಜಿಸಿತ್ತು. ಹುಬ್ಬಳ್ಳಿ-ಧಾರವಾಡ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀ ವೀರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೊಂದು ಬಂಜೆತನದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಕಳಂಕವನ್ನು ಕಡಿಮೆ ಮಾಡುವ ಅರ್ಥಪೂರ್ಣ ಪ್ರಯತ್ನವಾಗಿತ್ತು. ಬಂಜೆತನದ ಬಗ್ಗೆ ಮುಕ್ತ ಮಾತುಕತೆಯನ್ನು ಪ್ರೋತ್ಸಾಹಿಸುವ ಮತ್ತು ಹಿಂಜರಿಕೆಯಿಲ್ಲದೆ ಸಮಯೋಚಿತ ಚಿಕಿತ್ಸೆ ಪಡೆಯುವ ಮಹತ್ವವನ್ನು ಎತ್ತಿ ತೋರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆ, ರೋಟರಿ ಕ್ಲಬ್, ಲೇಡೀಸ್ ಸರ್ಕಲ್, ದೇಶಪಾಂಡೆ ಸ್ಕಿಲ್ಲಿಂಗ್, ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮತ್ತು ಸಂಜೀವಿನಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 350 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ನೋವಾ ಐವಿಎಫ್ ಹುಬ್ಬಳ್ಳಿಯ ಫರ್ಟಿಲಿಟಿ ತಜ್ಞರಾದ ಡಾ. ಪವಿತ್ರಾ ಶ್ಯಾಮ್ ಸುಂದರ್, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಬಂಜೆತನದ ಜೊತೆಗೆ ಅಂಟಿಕೊಂಡಿರುವ ಸಾಮಾಜಿಕ ಕಳಂಕದ ಬಗ್ಗೆ ಮಾತನಾಡಿದರು. “ಇಂದಿಗೂ, ಆನೇಕ ದಂಪತಿಗಳು ಫರ್ಟಿಲಿಟಿ ಚಿಕಿತ್ಸೆಯನ್ನು ಪಡೆಯಲು ಅಥವಾ ತಮ್ಮ ಐವಿಎಫ್ ಪ್ರಯಾಗ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಹತ್ತರಲ್ಲಿ ಆರು ದಂಪತಿಗಳು ಇದನ್ನು ಸಹಜವಾಗಿ ಸ್ವೀಕರಿಸಲು ಹೆಣಗಾಡುತ್ತಾರೆ. ಎಂದು ಅವರು ಹೇಳಿದರು. ದಂಪತಿಗಳಲ್ಲಿ ಪುರುಷರನ್ನು ಸೂಕ್ತವಾಗಿ ಪರೀಕ್ಷೆಗೊಳಪಡಿಸದ ಕಾರಣ ಪುರುಷ ಬಂಜೆತನ ಇನ್ನೂ ಪತ್ತೆಯಾಗದೆ ಹೋಗುತ್ತಿದೆ, ಎಂದು ಅವರು ಒತ್ತಿ ಹೇಳಿದರು. ಬಂಜೆತನ ಕೇವಲ ಮಹಿಳೆಯ ಜವಾಬ್ದಾರಿಯಲ್ಲ, ದಂಪತಿಗಳ ಸಮಸ್ಯೆಯಾಗಿದೆ ”ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಬಂಜೆತನ ಹೆಚ್ಚುತ್ತಿದೆ. ಇದು ಸಾಮಾನ್ಯವಾಗಿ ಕೃಷಿಯಲ್ಲಿ ಬಳಸುವ ಕೀಟನಾಶಕಗಳಿಗೆ ಒಡ್ಡಿಕೊಳ್ಳುವುದರಿಂದ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ. 20 ನೇ ವಯಸ್ಸಿನ ಕೊನೆಯಲ್ಲಿ ಮತ್ತು 30ರ ಆರಂಭದಲ್ಲಿ ಮಹಿಳೆಯರಲ್ಲಿ ಅಂಡಾಣುವಿನ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಕೊರತೆ ಕಂಡುಬರುತ್ತಿದೆ. ಒತ್ತಡ ಮತ್ತು ನಗರೀಕರಣದ ಹೊರತಾಗಿ. ರಾಸಾಯನಿಕಗಳಿಗೆ ಒಡ್ಡಿಕೊಳ್ಳುವಿಕೆ. ಪ್ಲಾಸ್ಟಿಕ್ ಮತ್ತು ಜಡ ಜೀವನಶೈಲಿ, ಫರ್ಟಿಲಿಟಿ ಕುಸಿಯಲು ಕಾರಣವಾಗಬಹುದು, ಎಂದು ಡಾ. ಪವಿತ್ರಾ ಶ್ಯಾಮ್ಸುಂದರ್ ಹೇಳಿದರು. “ಕಿರಿಯ ವಯಸ್ಸಿನ ಮಹಿಳೆಯರಲ್ಲಿ ಕಡಿಮೆ ಸಂಖ್ಯೆಯ ಅಂಡಾಣು ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಸೋಶಿಯಲ್ ಎಗ್ ಫ್ರೀಜಿಂಗ್ ಆಯ್ಕೆಗಳ ಬಗ್ಗೆ ರೋಗಿಗಳಲ್ಲಿ ಅರಿವು ಮೂಡಿಸಬೇಕಾಗಿದೆ.’ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಡಾ. ಪ್ರಶಾಂತ್ ಎ.ಎಸ್ (ಪ್ರಾಂಶುಪಾಲರು, ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹೆಗ್ಗೇರಿ), ಶ್ರೀಮತಿ ಯೋಗಿತಾ ಅಗರ್ವಾಲ್ (ಮುಖ್ಯಸ್ಥರು, ಲೇಡೀಸ್ ಸರ್ಕಲ್), ರೊ. ಭರತೇಶ್ ಡಿ ಬೆನ್ನಾಡಿ (ಅಧ್ಯಕ್ಷರು, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ಪಶ್ಚಿಮ), ಡಾ. ರಾಚೆಲ್ ಪ್ರಕಾಶ್ (ಪ್ರಾಂಶುಪಾಲರು, ಶ್ರೀಮತಿ ಶಕುಂತಲಾ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್), ರೊ. ಜ್ಯೋಶ್ವಾ ಆರ್ ಕಡೋಲ್ (ಅಧ್ಯಕ್ಷೆ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ-ಪೂರ್ವ), ಮತ್ತು ಜ್ಯೋತಿ ಶೇರ್ (ಅಧ್ಯಕ್ಷೆ, ಇನ್ನರ್ ವೀಲ್ ಹುಬ್ಬಳ್ಳಿ-ಪಶ್ಚಿಮ) ಭಾಗವಹಿಸಿದರು
