
ಬೆಳಗಾವಿ
ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ವರ್ಗಾವಣೆ ರದ್ದಾಗಿದ್ದರೂ ಇಲ್ಲಿಯವರೆಗೂ ಬೆಳಗಾವಿಗೆ ಆಗಮಿಸದೆ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುದ್ದಾರೆ.
ಎಸ್.ಬಿ.ಶೆಟ್ಟಣ್ಣವರಗೆ ಸರಕಾರ ವರ್ಗಾವಣೆ ಮಾಡಿದಾಗಲು ಬೆಳಗಾವಿಯಲ್ಲಿರದ ಅವರು, ವರ್ಗಾವಣೆ ರದ್ದಾದರೂ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬಾರದೆ ಇರುವುದರಿಂದ ನಿತ್ಯ ಜನರು ಕಚೇರಿ ಕೆಲಸಕ್ಕೆ ಬರುವವರು ಶೆಟ್ಟಣ್ಣವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಕಳೆದ ಜು. 11 ರಂದು ವರ್ಗಾವಣೆಯಾದಗ ಸರಕಾರ ಅವರಿಗೆ ಪ್ರಭಾರಿ ಸಹಕಾರಿ ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು. ಅವರ ಪ್ರಾದೇಶಿಕ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿದರೂ ಬೆಂಗಳೂರಿನಲ್ಲಿ ಕುಳಿತುಕೊಂಡು ಬೆಳಗಾವಿಯಲ್ಲಿನ ಕೆಲಸ ಮಾಡುವ ಅವರು ಬೆಳಗಾವಿ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ವಿಜಯಪುರ, ಬಾಗಲಕೋಟ, ಹುಬ್ಬಳ್ಳಿ- ಧಾರವಾಡ, ಹಾವೇರಿ ಜಿಲ್ಲೆಯ ಜನರು ಪರದಾಡುವಂತಾಗಿದೆ. ಕೂಡಲೇ ಎಸ್. ಬಿ.ಶೆಟ್ಟಣ್ಣವರ ಬೆಳಗಾವಿ ಪ್ರಾದೇಶಿಕ ಕಚೇರಿಗೆ ಬರದಿದ್ದರೆ ಹೋರಾಟ ಮಾಡುವ ಪರಿಸ್ಥಿತಿಗೆ ಸಾರ್ವಜನಿಕರು ನಿರ್ಧರಿಸಿದ್ದಾರೆ.
