
ಬೆಳಗಾವಿ
ಡೆನ್ಮಾರ್ಕನ ಕೊಪನಹೆಗನ್ ನಲ್ಲಿ WTC ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಗ್ಲೋಬಲ್ ಚಾಲೆಂಜ್ ಫಿಟನೆಸ್ ಸ್ಪರ್ಧೆಯಲ್ಲಿ 2004ನೇ ಬ್ಯಾಚನ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ‘ಐರನ್ ಮ್ಯಾನ್’ ಆಗಿ ಹೊರಹೊಮ್ಮಿದ್ದು ಭಾರತೀಯ ಪೊಲೀಸ್ ಹಾಗೂ ರಾಜ್ಯ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿದ್ದಾರೆ.
ಟ್ರೈಯಥ್ಲಾನ್ ಸ್ಪರ್ಧೆಯು ಸಮುದ್ರದಲ್ಲಿ 3.8ಕಿಮೀ ಈಜು, ಅದೇ ಕ್ಷಣ 180ಕಿಮೀ ಸೈಕ್ಲಿಂಗ್ ಹಾಗೂ ಮರುಕ್ಷಣವೇ 45ಕಿಮೀ ರನ್ನಿಂಗ್ ಬಿಟ್ಟುಬಿಡದೇ 14.45 ಗಂಟೆಯಲ್ಲಿ ಮುಗಿಸುವ ಮೂಲಕ ಜಾಗತಿಕ ದಾಖಲೆ ನಿರ್ಮಿಸುವ ಚಾಲೆಂಜ್ ಆಗಿದ್ದು, ಇದರ ಸಾಧಕರನ್ನು ಐರನ್ ಮ್ಯಾನ್ ಎಂದು ಕರೆಯಲಾಗುತ್ತದೆ.
ಈ ಸ್ಒರ್ಧೆಗೆ ಕನಿಷ್ಠ ಒಂದು ವರ್ಷ ಮುಂಚೆಯಿಂದಲೇ ತಯ್ಯಾರಿ ಮಾಡಬೇಕಾಗುತ್ತದೆ, ಆಹಾರದಲ್ಲಿ ಮಾರ್ಪಾಡು ಮಾಡಬೇಕಾಗುತ್ತದೆ, ಮಾನಸಿಕವಾಗಿ ಸಿದ್ಧವಾಗಬೇಕಾಗುತ್ತದೆ. ಮಾನವನ ದೇಹದ ಪಿಟನೆಸ್ ಕಾಯ್ದುಕೊಳ್ಳುವ ಗರಿಷ್ಠ ಕಸರತ್ತು ಇದಾಗಿರುತ್ತದೆ. ಸಂದೀಪ ಪಾಟೀಲ ಸಾಧನೆಗೆ ಭಾರತ ಸರಕಾರ, ಕ್ರೀಡಾ ಪ್ರಾಧಿಕಾರ, ಕರ್ನಾಟಕ ಸರಕಾರ, ಐಪಿಎಸ್ ಅಸೋಸಿಯೇಷನ್ ಹಾಗೂ ರಾಜ್ಯ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ. 2011ರಲ್ಲಿ ಸಂದೀಪ ಪಾಟೀಲ ಬೆಳಗಾವಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.
