
ಧಾರವಾಡ
ಇಲ್ಲಿನ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಜೈ ಕಿಸಾನ ಖಾಸಗಿ ಮಾರುಕಟ್ಟೆಯ ಅನುಮತಿಯನ್ನು ಸರಕಾರ ರದ್ದು ಮಾಡಿರುವ ಆದೇಶವನ್ನು ಸೋಮವಾರ ಧಾರವಾಡದ ಹೈಕೋರ್ಟ್ ಎತ್ತಿ ಹಿಡಿದ್ದು ಖಾಸಗಿ ಮಾರುಕಟ್ಟೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿ ಮಹತ್ವದ ಆದೇಶ ಹೊರಡಿಸಿದೆ.
ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ರೈತರಿಗೆ ಅನ್ಯಾಯ ಮಾಡುವುದರ ಜೊತೆಗೆ ಸರಕಾರಕ್ಕೆ ಕೋಟ್ಯಂತರ ರೂ. ಹಾನಿ ಮಾಡಿದ್ದಾರೆ. ಖಾಸಗಿ ಮಾರುಕಟ್ಟೆ ಅಕ್ರಮವಾಗಿ ಆರಂಭವಾದಾಗಿನಿಂದಲೂ ಸರಕಾರಿ ಎಪಿಎಂಸಿ ಆದಾಯಕ್ಕೆ ನಷ್ಟ ಅನುಭವಿಸಿದೆ.
ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ಕಾನೂನು ಬಾಹಿರವಾಗಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಕೃಷಿ ಜಮೀನು ಪಡೆದುಕೊಂಡು ತಮ್ಮ ಪ್ರಭಾವ ಬೆಳೆಸಿ ಖಾಸಗಿ ಮಾರುಕಟ್ಟೆ ಸ್ಥಾಪನೆ ಮಾಡಿ ರೈತರಿಗೆ ತೂಕದಲ್ಲಿ ಮೋಸ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಇಲ್ಲದೆ ವ್ಯಾಪಾರ ನಡೆಸಿದ್ದನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡು ಸರಕಾರ ಖಾಸಗಿ ಮಾರುಕಟ್ಟೆ ಅನುಮತಿ ರದ್ದು ಮಾಡಿರುವುದನ್ನು ಎತ್ತಿ ಹಿಡಿಯಿತು.
ಇದು ರೈತರ, ವ್ಯಾಪಾರಿಗಳ ಮತ್ತು ಸಾರ್ವಜನಿಕರ ಗೆಲುವಾಗಿದೆ. ಸರ್ಕಾರದ ನಿಯಂತ್ರಿತ ಮಾರುಕಟ್ಟೆ ನೈತಿಕ ವ್ಯಾಪಾರ, ಸರ್ಕಾರಕ್ಕೆ ಆದಾಯ, ಗ್ರಾಹಕರಿಗೆ ಭದ್ರತೆ ರಾಜಕುಮಾರ ಟೋಪಣ್ಣವರ, ಸುಜೀತ ಮುಳಗುಂದ ರೈತ ನಾಯಕ ಸಿದ್ದಗೌಡ ಮೋಡಗಿ ಮತ್ತು ಚನ್ನಪ್ಪ ಪೂಜಾರಿ ಪರ ವಕೀಲರಾಗಿ ನಿತಿನ್ ಬೋಳಬಂಡಿ, ಅಡ್ವೊ. ಶೋಭಾ ಎಚ್ ಮತ್ತು ಸೀನಿಯರ್ ಅಡ್ವೊಕೇಟ್ ಅನಂತ ಮಂಡಗಿ ಅವರ ಶ್ರಮ ಫಲ ನೀಡಿದೆ.
