Thursday, November 19, 2026
HomeBelagaviತಿಥಿಗೆ ಬಂದವರು ಊಂಡು ಹೋದರು ಚಿನ್ನಾಭರಣ ಕೊಂಡು ಪರಾರಿಯಾದರು

ತಿಥಿಗೆ ಬಂದವರು ಊಂಡು ಹೋದರು ಚಿನ್ನಾಭರಣ ಕೊಂಡು ಪರಾರಿಯಾದರು

ಬೆಳಗಾವಿ
ಗಂಡನ ಅಣ್ಣನ ತಿಥಿ ಊಟಕ್ಕೆ ಬಂದಿದ್ದ ಸಂಬಂಧಿಕರು ಮನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು ಪ್ರೀತಿ ನೇಲಗಾರ ಕುಟುಂಬಸ್ಥರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಬಳಿ ತಮ್ಮ ದೂರು ಹೇಳಿಕೊಂಡಿದ್ದಾರೆ.
ಗಂಡನ ಅಣ್ಣನ ಸಹೋದರನ ತಿಥಿ ಮಾಡಲು ಬಂದಿದ್ದ ಶೈಲಾ, ನೇಲಗಾರ, ಪ್ರವೀಣ ನೇಲಗಾರ, ನವೀನ ನೇಲಗಾರ ಎಂಬುವರು ಮನೆಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರಲ್ಲಿ ಮನವಿ ಮಾಡಿದರು.
ಕೂಡಲೇ ನೇಸರಗಿ ಪೊಲೀಸ್ ಠಾಣೆಗೆ ಕರೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಸೂಕ್ತ ತನಿಖೆ ನಡೆಸಿ ಇವರಿಗೆ ನ್ಯಾಯ ಕೊಡಿಸುವಂತೆ ಸೂಚನೆ ನೀಡಿದರು. ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Total Views 12
RELATED ARTICLES

Most Popular

Recent Comments

KNN City News
Home
E-Paper