Monday, November 23, 2026
HomeBelagaviಬೆಳಗಾವಿ ಕನ್ನಡದ ಹಬ್ಬದ ವೈಭವಕ್ಕೆ ಸಾಕ್ಷಿಯಾಗಿದ್ದು ಬರೋಬರಿ ನಾಲ್ಕು ಲಕ್ಷ ಕನ್ನಡಿಗರು

ಬೆಳಗಾವಿ ಕನ್ನಡದ ಹಬ್ಬದ ವೈಭವಕ್ಕೆ ಸಾಕ್ಷಿಯಾಗಿದ್ದು ಬರೋಬರಿ ನಾಲ್ಕು ಲಕ್ಷ ಕನ್ನಡಿಗರು

ಬೆಳಗಾವಿ
ಬೆಳಗಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕೇವಲ ಉತ್ಸವವಾಗಿ ಉಳಿಯದೆ ಈ ಉತ್ಸವ ಕನ್ನಡದ ಹಬ್ಬವಾಗಿ ಮಾರ್ಪಟ್ಟು ಈಡೀ ಬೆಳಗಾವಿ ನಗರವೇ ಕನ್ನಡಮಯವಾಗಿ ಇಲ್ಲಿಯ ಕಣ ಕಣವೂ ಕನ್ನಡ ಕನ್ನಡ ಎನ್ನುವ ವಾತಾವರಣ ಸೃಷ್ಟಿಯಾಗಿ ಬರೋಬರಿ ನಾಲ್ಕು ಲಕ್ಷ ಜನ ಕನ್ನಡಿಗರು ರಾಜ್ಯೋತ್ಸವಕ್ಕೆ ಸಾಕ್ಷಿಯಾದರು.
ಶನಿವಾರ ಬೆಳಗ್ಗೆಯಿಂದಲೇ ಕೈಯಲ್ಲಿ ಕನ್ನಡ ಬಾವುಟ ಹಿಡಿದುಕೊಂಡು ಜೈ ಕರ್ನಾಟಕ ಘೋಷಣೆಗಳನ್ನು ಕೂಗುತ್ತ ಬೆಳಗಾವಿ ನಗರಕ್ಕೆ ಧಾವಿಸಿದರು. ಎಲ್ಲಿ ನೋಡಿದ್ದಲ್ಲಿ ಕನ್ನಡದ ಬಾವುಟಗಳು, ಕನ್ನಡ ಘೋಷಣೆಗಳು ಮೊಳಗಿದ್ದನ್ನು ನೋಡಲು ಕನ್ನಡದ ಅಭಿಮಾನಿಗಳ ಸಾಗರವೇ ಬೆಳಗಾವಿಗೆ ಹರಿದು ಬಂದಿತ್ತು.


ಇನ್ನೂ ರಾಜ್ಯೋತ್ಸವದ ವೇಳೆ ಪಾಲಿಕೆಯ ಕೆಲ ಸದಸ್ಯರು ನಾಡ್ರೋಹಿ ವರ್ತನೆ ಮಾಡಿದ ಘಟನೆಯೂ ನಡೆದಿದೆ. ಬೆಳಗಾವಿ ‌ಪಾಲಿಕೆಯಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವದಲ್ಲಿ ಮರಾಠಿ ಭಾಷಿಕ ಸದಸ್ಯರು ರಾಜ್ಯೋತ್ಸವದಲ್ಲಿ ಬಹುತೇಕರು ಗೈರಾಗಿದ್ದರು. ಕೆಲ ಸದಸ್ಯರು ಹೆಗಲ ಮೇಲೆ ಕನ್ನಡದ ಶಾಲು ಹಾಕಲು ನಿರಾಕರಿಸಿದ ಘಟನೆಯೂ ನಡೆದಿದೆ.
ಇದರ ನಡುವೆಯೂ ಬೆಳಗಾವಿ ರಾಜ್ಯೋತ್ಸವ ಅದ್ಧೂರಿ ಮೆರವಣಿಗೆಯಲ್ಲಿ ಬರೋಬರಿ ನಾಲ್ಕು ಲಕ್ಷ ಜನರು ಸೇರಿಕೊಂಡು ಸಂಭ್ರಮದಿಂದ ಆಚರಿಸಿದರು. ನಗರದಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ವಾಹನಗಳು ಪಾರ್ಕಿಂಗ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Total Views 151
RELATED ARTICLES

Most Popular

Recent Comments

KNN City News
Home
E-Paper