Monday, November 23, 2026
HomeBelagaviಡಾ. ಮಹಾಂತೇಶ ಶಾಸ್ತ್ರಿಗಳಿಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ

ಡಾ. ಮಹಾಂತೇಶ ಶಾಸ್ತ್ರಿಗಳಿಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ

ಬೆಳಗಾವಿ
ಬೈಲಹೊಂಗಲ ಆರಾದ್ರಿಮಠದ ಶ್ರೀ ಡಾ. ಮಹಾoತೇಶ ಶಾಸ್ತ್ರಿಗಳವರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಿ ಬೆಳಗಾವಿಯ ಜಿಲ್ಲಾ ಆಡಳಿತ ಗೌರವಿಸಿತು. ಈ ಸಂದರ್ಭದಲ್ಲಿ ಬೆಳಗಾವಿ ಲಕ್ಷ್ಮಿಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಡಾ. ಮಹಾಂತೇಶ ಶಾಸ್ತ್ರೀಗಳಿಗೆ ಹಾಗೂ ಅವರ ಧರ್ಮಪತ್ನಿ ಪ್ರೀತಿ ಮಹಾಂತೇಶ ಶಾಸ್ತ್ರೀಗಳವರಿಗೆ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಗೌರವಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಡಾ. ಮಹಾಂತೇಶ್ ಶಾಸ್ತ್ರಿಗಳು ನಮ್ಮ ಪರಮ ಶಿಷ್ಯರು. ಅವರು ಎಲ್ಲ ರಂಗದಲ್ಲಿಯೂ ಕೂಡ ಕಾರ್ಯವನ್ನು ಮಾಡಿದ್ದಾರೆ. ಬೈಲಹೊಂಗಲ ನಗರದಲ್ಲಿ ನೂರಾರು ಕಲಾವಿದರನ್ನು ಕರೆಯಿಸಿ ಅವರಿಗೆ ತಮ್ಮ ಕ್ಷೇತ್ರದಿಂದ ವಿಶೇಷವಾದ ಪ್ರೋತ್ಸಾಹವನ್ನು ನೀಡಿ ಗೌರವಿಸಿದ್ದನ್ನು ಸ್ಮರಿಸಿದ ಶ್ರೀಗಳು ಕನ್ನಡ ಉಳಿಯಬೇಕು ಬೆಳೆಯಬೇಕು ಎನ್ನುವ ದೃಷ್ಟಿಕೋನದಿಂದ ಶಾಸ್ತ್ರೀಗಳು ತುಂಬಾ ಕಾರ್ಯವನ್ನು ಮಾಡಿದ್ದಾರೆ. ಉಚಿತ ಸಾಮೂಹಿಕ ವಿವಾಹವನ್ನು ಕೂಡ ನೆರವೇರಿಸಿದ್ದಾರೆ. ಅಷ್ಟೇ ಅಲ್ಲದೇ ಶ್ರೀಮಾತಾ ಗುರುಕುಲವನ್ನು ಸ್ಥಾಪಿಸಿ ಶೈಕ್ಸಣಿಕ ರಂಗದಲ್ಲಿಯೂ ಕೂಡ ಅಪರೂಪದ ಕಾರ್ಯವನ್ನು ಮಾಡಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ
ಬೆಳಗಾವಿಯ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಜಕ್ಕೂ ಅಭಿನಂದನೀಯ ಎಂದರು.

ಪ್ರಶಸ್ತಿಯನ್ನು ಸ್ವೀಕರಿಸಿ ಶ್ರೀಗಳಿಂದ ಆಶೀರ್ವಾದವನ್ನು ಪಡೆದ ಡಾ. ಮಹಾಂತೇಶ್ ಶಾಸ್ತ್ರಿಗಳು ಮಾತನಾಡಿ ನಾನು ಬೆಳೆಯಲು ಏನೇ ಸಾಧನೆ ಮಾಡಲು ಹಿಂದೆ ಗುರು ಇದ್ದಾರೆ ಎಂದರೆ ಅವರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು. ಅವರ ಆಶೀರ್ವಾದದಿಂದ ಈ ನಿಟ್ಟಿನ ಕಾರ್ಯಗಳು ಆಗುತ್ತಿವೆ. ನಮಗೆ ಪ್ರೋತ್ಸಾಹಿಸುತ್ತಿರುವ ಎಲ್ಲಾ ಜನತೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ ಎಂದು ಭಾವುಕರಾಗಿ ನುಡಿದರು.
****

Total Views 11
RELATED ARTICLES

Most Popular

Recent Comments

KNN City News
Home
E-Paper