Monday, November 23, 2026
HomeBelagaviಪ್ಲೈಓವರ್ ನಿರ್ಮಾಣಕ್ಕೆ 270 ಕೋಟಿ ಬಿಡುಗಡೆ

ಪ್ಲೈಓವರ್ ನಿರ್ಮಾಣಕ್ಕೆ 270 ಕೋಟಿ ಬಿಡುಗಡೆ

ಬೆಳಗಾವಿ
ಬೆಳಗಾವಿ ನಗರದ ಪ್ಲೈಓವರ್ ನಿರ್ಮಾಣಕ್ಕೆ ರಾಜ್ಯ ಸರಕಾರ 270 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಉದ್ಯಮಿದಾರರು, ಸಂಘ ಸಂಸ್ಥೆ ಹಾಗೂ ನ್ಯಾಯವಾದಿಗಳ ಸಲಹೆ ಪಡೆದು ಟೆಂಡರ್ ಆಹ್ವಾನಿಸು ಸಿದ್ಧತೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆ, ಬುಡಾ ಹಾಗೂ ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪ್ಲೈಓರ್ ನಿರ್ಮಾಣ‌ಕ್ಕೆ ಈಗಾಗಲೇ ಸರಕಾರ ಅನುದಾನ ಬಿಡುಗಡೆ ಮಾಡಿದೆ. ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಲಾಗಿದೆ. ಸಂಘ ಸಂಸ್ಥೆಗಳ ಮತ್ತು ನ್ಯಾಯವಾದಿಗಳ ಜೊತೆಗೆ ಸಭೆ‌ ನಡೆಸಿದ ಬಳಿಕ ಟೆಂಡರ್ ಕರೆಯಲಾಗುವುದು ಎಂದರು.
ನಗರದ ಚನ್ನಮ್ಮ ವೃತ್ತ, ಸಂಭಾಜಿ ವೃತ್ತ ಹಾಗೂ ಮೂರನೇ ರೈಲ್ಬೆ ಗೇಟ್ ವರೆಗೆ ಪ್ಲೈಓರ್ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದರು.
ಸ್ಮಾರ್ಟ್ ಸಿಟಿಯಲ್ಲಿ ಕಟ್ಟಡವಾಗಿದೆ. ಟೆಂಡರ್ ಆಗಿಲ್ಲ. ಇದರಿಂದ ಸಮಸ್ಯೆಯಾಗಿದೆ. ಎರಡ್ಮೂರ ಕಟ್ಟಡ ‌ನಿರ್ಮಾಣವಾಗಿದೆ. ಅದರ ಬಾಡಿಗೆ ಬರುತ್ತಿಲ್ಲ. ಅದನ್ನು ಟೆಂಡರ್ ಕರೆಯಬೇಕು ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಸ್ಮಾರ್ಟ್ ಸಿಟಿಯಿಂದ ಪೂರ್ಣಗೊಂಡ ಕಾಮಗಾರಿಗಳು ಮಹಾನಗರ ಪಾಲಿಕೆಗೆ ಹಸ್ತಾರಂತವಾಗಿದೆ‌. ಈಗ ಪಾಲಿಕೆಯಿಂದ ಆಕ್ಸನ್ ಆಗಬೇಕಿದೆ ಎಂದರು.
ರಾಜಕುಮಾರ ಟೋಪಣ್ಣವರ ಮಾತನಾಡಿ, ಬುಡಾದಿಂದ ಸಿಡಿಪಿಗೆ ಟೆಂಡರ್ ಕರೆದು ಒಂದು ವರ್ಷ ಕಳೆದರೂ ಯಾವುದೇ ಪ್ರಗತಿಯಾಗುತ್ತಿಲ್ಲ‌ ಎಂದು ಸಭೆಯಲ್ಲಿ ಸಚಿವರ ಗಮನಕ್ಕೆ ತಂದರು. ಅಲ್ಲದೆ, ಬೆಳಗಾವಿ ಸ್ಮಾರ್ಟ್ ಸಿಟಿಯಿಂದ ನಿರ್ಮಾಣವಾಗಿರುವ ಕಮಾಂಡ್ ಆ್ಯಂಡ್ ಕಂಟ್ರೋಲ್‌ ಸೆಂಟರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಸಮಜಾಯಿಸಿ ನೀಡಿದ ಬುಡಾ ಆಯುಕ್ತ ಶಕೀಲ್ ಅಹ್ಮದ್, ಟೆಂಡರ್ ಪಡೆದು ಕಂಪನಿಗೆ ಬುಡಾದಿಂದ ನೋಟಿಸ್ ನೀಡಲಾಗಿದೆ. ಈಗ ಅವರು ಬರಲಿಲ್ಲ ಎಂದರೆ ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಿಡಿಪಿ ಟೆಂಡರ್ ರದ್ದಾಗಿದ್ದರೆ ಹೊಸ ಸಿಡಿಪಿಗೆ ಟೆಂಡರ್ ಕರೆಯುವಂತೆ ಸೂಚಿಸಿದೆ. ಎರಡೂ ವರ್ಷದಿಂದ ಈ ಕಾಮಗಾರಿ‌ ನಡೆಯುತ್ತಿದೆ. ಸ್ಥಳೀಯರಿಗೆ ಆದ್ಯತೆ ನೀಡಿ ಟೆಂಡರ್ ನೀಡಿ ಸಮಸ್ಯೆ ಬಗೆ ಹರಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಶಾಸಕ ಆಸೀಫ್ ಸೇಠ್, ಜಿಪಂ‌ ಸಿಇಓ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 15
RELATED ARTICLES

Most Popular

Recent Comments

KNN City News
Home
E-Paper