
ಧಾರವಾಡ
ಹೊಸ ವರ್ಷದ ಅಂಗವಾಗಿ ಇಲ್ಲಿನ ಕ್ಯಾರಕೊಪ್ಪ ರಸ್ತೆಯ ಸಿದ್ಧಗಂಗಾ ನಗರದಲ್ಲಿರುವ ಶ್ರೀ ವೀಣಾ , ವಾಣಿ ಸಂಗೀತ ವಿದ್ಯಾಲಯದಲ್ಲಿ ಜ.4 ಭಾನುವಾರ ಬೆಳಗ್ಗೆ 10.30ಕ್ಕೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಗದಗದ ಪಂ.ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಡಾ. ಸುಮಿತ್ರಾ ಕಾಡದೇವರಮಠ ಆಮಿಸಲಿದ್ದಾರೆ. ಅತಿಥಿಗಳಾಗಿ ಕೃಷ್ಣಪ್ಪ ನಾಯಕ, ಚಂದ್ರಶೇಖರ ಮಮದಾಪುರ ಆಗಿಸಲಿದ್ದಾರೆ. ಸಂವಾದಿನಿಯನ್ನು ಸಂಗಪ್ಪ ಕೆಂದೂರ, ಕು.ನವೀನ ವಡವಿ, ತಬಲಾವನ್ನು ಪಂ.ಸುರೇಶ ನಿಡಗುಂದಿ, ಕು.ವಿಜಯ ಕಳಸನವರ ನುಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮೈಥಿಲಿ ಮೇಡೆದಾರ, ಉಮಾದೇವಿ ಮಣ್ಣೂರು ಉಪಸ್ಥಿತರಲಿದ್ದಾರೆ ಎಂದು ಶ್ರೀ ವೀಣಾ, ವಾಣಿ ಸಂಗೀತ ವಿದ್ಯಾಲಯದ ಸಂಸ್ಥಾಪಕ ಡಾ. ಶರಣಕುಮಾರ ಮೇಡೆದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
