Monday, November 23, 2026
HomeBelagaviಸಿದ್ಧಗಂಗೆಯ ಡಾ. ಶಿವಕುಮಾರ ಶ್ರೀಗಳ ಕಾರ್ಯ ಎಲ್ಲರಿಗೂ ಮಾದರಿ: ಶ್ರೀಶೈಲ ಜಗದ್ಗುರುಗಳು

ಸಿದ್ಧಗಂಗೆಯ ಡಾ. ಶಿವಕುಮಾರ ಶ್ರೀಗಳ ಕಾರ್ಯ ಎಲ್ಲರಿಗೂ ಮಾದರಿ: ಶ್ರೀಶೈಲ ಜಗದ್ಗುರುಗಳು

ಬೆಳಗಾವಿ
ಸಿದ್ಧಗಂಗೆಯ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ದಾಸೋಹ‌ ಮಾಡಿ ಅವರಿಗೆ ಸ್ಪೂರ್ತಿ ಚೇತನರಾಗಿ ನಿಂತವರು ಅವರ ಏಳನೇ ಪುಣ್ಯ ಸ್ಮರಣೋತ್ಸವದ ದಿನ ದಾಸೋಹದ ದಿನವಾಗಿ ನಾವೆಲ್ಲರೂ ಆಚರಿಸುತ್ತಿರುವುದು ಅಭಿಮಾನದ ಸಂಗತಿ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬುಧವಾರ ಅಜಂ ನಗರದಲ್ಲಿರುವ ಶ್ರೀ ರೇಣುಕಾಶ್ರಮದಲ್ಲಿ ದಾಸೋಹ ದಿನಾಚರಣೆಯ ಸಾನಿದ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರು, ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳು ಮಾಡುವ ದಾಸೋಹ ಮಠಗಳಿಗೆ ಅಷ್ಟೆ ಸ್ಪೂರ್ತಿ ನೀಡಲಿಲ್ಲ. ಸರಕಾರಕ್ಕೂ ಕೂಡ ಸ್ಪೂರ್ತಿಯನ್ನು ನೀಡಿದ ಪರಿಣಾಮ ಇವತ್ತು ಅಕ್ಷರ ದಾಸೋಹ ಎಂದು ಅಭಿಮಾನದಿಂದ ಹೇಳಿದರು.
ಅಜಂ ನಗರದ ರೇಣುಕಾ ಆಶ್ರಮದ ಧರ್ಮದರ್ಶಿ ಶ್ರೀ ಮಾತೋಶ್ರೀ ಗಂಗಾಮಾತಾಜಿ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆಯ ದಿನವನ್ನು ದಾಸೋಹ ದಿನವನ್ನು ನಮ್ಮ ಆಶ್ರಮದಲ್ಲಿ ಆಚರಿಸುತ್ತಿರುವುದು ನಮಗೆ ಅತೀವ ಸಂತೋಷ ತಂದಿದೆ. ಇದು ನಿಜವಾದ ಸಮನ್ವಯ. ಗುರು ವೀರಕ್ತರು ಒಂದಾದರೆ ಸಮಾಜ ಯಾವಾಗಲು ಕೂಡ ಸುಖವಾಗಿರುತ್ತದೆ ಎಂದರು‌.
ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಸ್ವಾಮೀಜಿ, ಬುಡರಕಟ್ಟಿಯ ಪಂಚಾಕ್ಷರಿ ಸ್ವಾಮೀಜಿ ಇದ್ದರು. ಕಾರ್ಯಕ್ರಮದಲ್ಲಿ ಆಶ್ರಮದ ಎಲ್ಲ ಭಕ್ತರು ಉಪಸ್ಥಿತರಿದ್ದರು.

Total Views 11
RELATED ARTICLES

Most Popular

Recent Comments

KNN City News
Home
E-Paper