Thursday, November 19, 2026
HomeBelagaviಕೆಎಲ್ಇ‌ ಸಂಸ್ಥೆಯಿಂದ ಹಿಂದೆ ಸರಿದ ಡಾ. ಕೋರೆ

ಕೆಎಲ್ಇ‌ ಸಂಸ್ಥೆಯಿಂದ ಹಿಂದೆ ಸರಿದ ಡಾ. ಕೋರೆ

ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ ಕೆಎಲ್ಇ ಯನ್ನು 40 ವರ್ಷಗಳ ಕಾಲ ಆಳುವ ಮೂಲಕ ಸಂಸ್ಥೆಗೆ ಜಾಗತಿಕ ಮನ್ನಣೆ ತಂದುಕೊಟ್ಟು ಸುವರ್ಣಯುಗವನ್ನಾಗಿಸಿದ್ದ ಡಾ.ಪ್ರಭಾಕರ ಕೋರೆ ಚೇರಮನ್ ಹುದ್ದೆಯಿಂದ ಹಠಾತ್ ಹಿಂದಕ್ಕೆ ಸರಿದಿದ್ದಾರೆ.
ಗುರುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ತಮ್ಮ ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ 1985ರಿಂದ ಅಲಂಕರಿಸಿದ್ದ ಪ್ರತಿಷ್ಠಿತ ಹುದ್ದೆಯನ್ನು ಬಿಟ್ಟುಕೊಟ್ಟಿದ್ದಾರೆ. ಕೋರೆಯವರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದಾಗಿ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊರೆಯವರ ಪುತ್ರಿ ಡಾ.ಪ್ರೀತಿ ದೊಡವಾಡ ನೂತನ ನಿರ್ದೇಶಕ ಮಂಡಳಿಯಲ್ಲಿದ್ದು, ಪುತ್ರ ಅಮಿತ್ ಕೋರೆ ಸಹ ಮುಂದುವರಿದಿದ್ದಾರೆ.

ಮಹಾಂತೇಶ ಕೌಜಲಗಿ ಅಧ್ಯಕ್ಷರಾಗಿ, ಬಸವರಾಜ ತಟವಟಿ ಉಪಾಧ್ಯಕ್ಷರಾಗಿ, ಅಮಿತ್ ಕೋರೆ, ಪ್ರವೀಣ ಬಾಗೇವಾಡಿ, ಪ್ರೀತಿ ದೊಡವಾಡ, ಮಹಾಂತೇಶ ಕವಟಗಿಮಠ, ಮಲ್ಲಿಕಾರ್ಜುನ ಕೊಳ್ಳಿ, ವಿಜಯ ಮೆಟಗುಡ್, ಜಯಾನಂದ ಮುನವಳ್ಳಿ, ಮಂಜುನಾಥ ಮುನವಳ್ಳಿ, ಬಸವರಾಜ ಪಾಟೀಲ, ವಿಶ್ವನಾಥ ಪಾಟೀಲ, ಯಲ್ಲನಗೌಡ ಪಾಟೀಲ, ಅನಿಲ ಪಟ್ಟೇದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Total Views 188
RELATED ARTICLES

Most Popular

Recent Comments

KNN City News
Home
E-Paper