Monday, November 23, 2026
HomeBelagaviಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಪೊಲೀಸಪ್ಪನ ಮಗ ಸೇರಿ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟ

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಪೊಲೀಸಪ್ಪನ ಮಗ ಸೇರಿ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟ

ಬೆಳಗಾವಿ
ಕಳೆದ ವರ್ಷದ ಮೇ ನಲ್ಲಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗ್ಯಾಂಗ್ ರೇಪ್ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ಇಂದು ಮಧ್ಯಾಹ್ನ ಶಿಕ್ಷೆ ಪ್ರಮಾಣ ಪ್ರಕಟಗೊಳ್ಳಲಿದೆ.
ಬಾಲಕಿಯೊಬ್ಬಳನ್ನು ಬೆಳಗಾವಿ ನಗರದಿಂದ ಪುಸಲಾಯಿಸಿ, ನಗರ ಹೊರವಲಯದ ಫಾರ್ಮಹೌಸವೊಂದರಲ್ಲಿ ಗ್ಯಾಂಗ್ ರೇಪ್ ನಡೆಸಲಾದ ಪ್ರಕರಣದಲ್ಲಿ ಒಟ್ಟು 6ಜನರನ್ನು ಮಾರ್ಕೇಟ್ ಪೊಲೀಸರು ಬಂಧಿಸಿದ್ದರು.
ಬಾಲಕಿಯನ್ನು ಮೂರು ಜನ ಅಪಹರಿಸಿಕೊಂಡು ಹೋಗಿ ಈ ಕುಕೃತ್ಯ ನಡೆಸಿದ್ದರು.
ಪ್ರಕರಣದಲ್ಲಿ ಫಾರ್ಮ್ ಹೌಸ್ ಮಾಲೀಕ ಸೇರಿ ಬಂಧಿಸಲಾದ ಓಟ್ಟು 6 ಜನರಲ್ಲಿ ಇಬ್ಬರು ಅಪ್ರಾಪ್ತ ಬಾಲಕರಾಗಿದ್ದರು. ನಾಲ್ಕು ಜನರ ವಿರುದ್ದ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದ್ದು, ಇನ್ನುಳಿಸ ಅಪ್ರಾಪ್ತ ಬಾಲಕರ ವಿರುದ್ಧವೂ ವಿಚಾರಣೆ ನಡೆಯಲಿದೆ.
ಮಾರ್ಕೇಟ್ ಠಾಣೆ ಅಂದಿನ ಇನ್ಸಪೆಕ್ಟರ್ ಧಾಮಣ್ಣವರ ತನಿಖೆ ನಡೆಸಿ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪೊಲೀಸ್ ಇನ್ಸಪೆಕ್ಟರ್ ಒಬ್ಬರ ಪುತ್ರ ಸಹ ಈ ಅತ್ಯಾಚಾರ ಕೃತ್ಯದಲ್ಲಿ ಭಾಗವಹಿಸಿದ್ದು, ಖೇದ ಮೂಡಿಸಿತ್ತು.

Total Views 166
RELATED ARTICLES

Most Popular

Recent Comments

KNN City News
Home
E-Paper