Monday, November 23, 2026
HomeBelagaviಬಾಲ್ಯ ವಿವಾಹ ತಡೆದು ಬಾಲಕಿ ರಕ್ಷಣೆ ಮಾಡಿದ ಅಕ್ಕ ಪಡೆ

ಬಾಲ್ಯ ವಿವಾಹ ತಡೆದು ಬಾಲಕಿ ರಕ್ಷಣೆ ಮಾಡಿದ ಅಕ್ಕ ಪಡೆ

 

ಬೆಳಗಾವಿ
ನಗರದ ವಂಟಮುರಿ ಕಾಲನಿಯಲ್ಲಿ ನಡೆಯಲಿದ್ದ ಬಾಲ್ಯ ವಿವಾಹವನ್ನು ಅಕ್ಕಪಡೆ ಹಾಗೂ ಪೊಲೀಸ್ ಇಲಾಖೆ ತಡೆದು 17 ವರ್ಷದ ಬಾಲಕಿಯನ್ನು ರಕ್ಷಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಏ.20 ರಂದು ಪೆಟ್ರೋಲಿಂಗ್ ವೇಳೆ ಅಕ್ಕಪಡೆ ಸಿಬ್ಬಂದಿಗೆ ಒಂದು ಮನೆಯ ಮುಂದೆ ಮಂಟಪ ಹಾಕಿರುವುದು ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದರು. ಈ ವೇಳೆ ಏ.21ರಂದು ಕುಮಾರಿ ಮೈನಾ (ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪುಣಾ ನಿವಾಸಿಯೊಂದಿಗೆ ನೆರವೇರಿಸಲು ಸಿದ್ಧತೆ ಮಾಡಿರುವುದು ತಿಳಿದುಬಂದಿತು.
ಬಾಲಕಿಯ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ ಪರಿಶೀಲಿಸಿದಾಗ, ಆಕೆಗೆ ಕೇವಲ 17 ವರ್ಷ 4 ತಿಂಗಳು ವಯಸ್ಸು ಇರುವುದಾಗಿ ದೃಢಪಟ್ಟಿತು. ತಕ್ಷಣ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದಿಲೀಪ ನಿಂಬಾಳಕರ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರ ಮಾರ್ಗದರ್ಶನದಲ್ಲಿ ಮಕ್ಕಳ ಸಹಾಯವಾಣಿ ತಂಡ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಯ 112 ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಕಾರ್ಯಾಚರಣೆ ನಡೆಸಲಾಯಿತು.ಸಮಯಕ್ಕೆ ತಕ್ಕಂತೆ ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಈ ಸಂಬಂಧ ಬಾಲಕಿಯ ತಂದೆಯ ವಿರುದ್ಧ ಬೆಳಗಾವಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಅಕ್ಕಪಡೆ ಸಿಬ್ಬಂದಿಯಾದ ಸರಸ್ವತಿ ಕರಿಗಾರ, ಸ್ವಪ್ಪಾ ಗೋಂಧಳಿ, ಮಲ್ಲಯ್ಯ ಕರಡಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ಮಲ್ಲೇಶ ಕುಂದರಗಿ ಭಾಗವಹಿಸಿದ್ದರು.

Total Views 148
RELATED ARTICLES

Most Popular

Recent Comments

KNN City News
Home
E-Paper