
ಬೆಳಗಾವಿ
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಪಿಎಸ್ಐ ಸಾರ್ವಜನಿಕವಾಗಿ ವ್ಯಕ್ತಿಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ.
ಗೋಕಾಕ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಕಿರಣ ಮೋಹಿತೆ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಎಫ್ಐಆರ್ ದಾಖಲಾಗಿರುವ ಕುರಿತು ಮಾಹಿತಿ ಕೇಳಲು ಠಾಣೆ ಬಳಿ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಪಿಎಸ್ಐ ಅವಾಚ್ಯ ಪದಗಳಿಂದ ಬೈದಿದ್ದಾರೆ ಎನ್ನಲಾಗಿದೆ.
“ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಮೇಲೆ ಎಫ್ಐಆರ್ ಯಾಕೆ ಸರ್..?” ಎಂದು ಪ್ರಶ್ನಿಸಿದ ವ್ಯಕ್ತಿಗೆ, “ಅವರು ಬಂದು ನಿಮ್ಮ ಮೇಲೆ ಕಂಪ್ಲೇಂಟ್ ಕೊಟ್ಟು ಹೋಗಿದ್ದಾರೆ, ನಾನೇನು ಮಾಡಲಿ” ಎಂದು ಪಿಎಸ್ಐ ಆಕ್ರೋಶ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಕೇಳಿಬಂದಿದೆ ಎನ್ನಲಾಗಿದೆ.
ಇದೇ ವೇಳೆ ವ್ಯಕ್ತಿಗೆ “ಬೋ… ಮಗನ ಬಂದ್ರೆ ಬಾಯಲ್ಲಿ ಬೂಟ್ ಹಾಕುತ್ತೇನೆ” ಸೇರಿದಂತೆ ಅವಮಾನಕಾರಿ ಪದ ಬಳಕೆ ಮಾಡಿರುವ ಆರೋಪವೂ ಕೇಳಿಬಂದಿದೆ.
ಹಲವು ಬಾರಿ ಠಾಣೆಗೆ ಭೇಟಿ ನೀಡಿದರೂ ಸರಿಯಾಗಿ ಸ್ಪಂದನೆ ಸಿಗಲಿಲ್ಲ ಎಂದು ವ್ಯಕ್ತಿ ಆರೋಪಿಸಿದ್ದು, ಹೊರಗಡೆ ಇದ್ದ ಸಂದರ್ಭದಲ್ಲಿ ಭೇಟಿ ಮಾಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
ಪಿಎಸ್ಐ ವ್ಯಕ್ತಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ಗೋಕಾಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
