Thursday, November 19, 2026
HomeBelagaviಯಾವುದೇ ಕ್ಷಣದಲ್ಲಿ ನೀಲಣ್ಣವರ ಬಂಧನ ?

ಯಾವುದೇ ಕ್ಷಣದಲ್ಲಿ ನೀಲಣ್ಣವರ ಬಂಧನ ?

ಬೆಳಗಾವಿ
ಶಿವಾನಂದ ನೀಲಣ್ಣವರ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನೆಲೆ ಪೊಲೀಸ್ ಚಟುವಟಿಕೆ ಚುರುಕುಗೊಂಡಿದೆ.ಕೇಸ್ ದಾಖಲಾಗುತ್ತಿದ್ದಂತೆಯೇ ಶಿವಾನಂದ ನೀಲಣ್ಣವರ್ ನಿವಾಸಕ್ಕೆ ಪೊಲೀಸರು ಆಗಮಿಸಿದ್ದಾರೆ. ತನಿಖಾಧಿಕಾರಿಯಾಗಿರುವ ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಕ್ ಹಾಗೂ ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ಪೊಲೀಸ್ ತಂಡ ಶಿವಬಸವ ನಗರದ ನಿವಾಸಕ್ಕೆ ಭೇಟಿ ನೀಡಿದೆ.
ಕೆಲವೇ ಕ್ಷಣಗಳಲ್ಲಿ ಶಿವಾನಂದ ನೀಲಣ್ಣವರ್ ಬಂಧನ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನಿವಾಸದ ಹೊರಗೆ ಪೊಲೀಸ್ ಅಧಿಕಾರಿಗಳು ಕಾವಲು ನಿಂತಿದ್ದು, ಪರಿಸ್ಥಿತಿ ಮೇಲೆ ನಿಗಾ ವಹಿಸಲಾಗಿದೆ.
ಇನ್ನೂ ಮನೆ ಒಳಗೇ ಇರುವ ಶಿವಾನಂದ ನೀಲಣ್ಣವರ್ ಹೊರಗೆ ಬಂದಿಲ್ಲ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

Total Views 48
RELATED ARTICLES

Most Popular

Recent Comments

KNN City News
Home
E-Paper