Monday, November 23, 2026
HomeBelagaviಮೊಬೈಲ್ ಹ್ಯಾಕ್ ಮಾಡಿ ಗಜಾನನಿಗೆ ಲಕ್ಷಾಂತರ ರೂ. ಪಂಗನಾಮ

ಮೊಬೈಲ್ ಹ್ಯಾಕ್ ಮಾಡಿ ಗಜಾನನಿಗೆ ಲಕ್ಷಾಂತರ ರೂ. ಪಂಗನಾಮ

ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಆರ್‌ಟಿಒ ಚಲನ್ ಹೆಸರಿನಲ್ಲಿ ವಾಟ್ಸಾಪ್‌ಗೆ ಎಪಿಕೆ ಫೈಲ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ 2,44,791ರೂ. ಹಣವನ್ನು ಅಪರಿಚಿತರು ವರ್ಗಾಯಿಸಿಕೊಂಡಿರುವ ಘಟನೆ ನಡೆದಿದೆ.
ರಾಯಬಾಗ ತಾಲೂಕಿನ ಬೊರಗಾವಿ ಗ್ರಾಮದ ನಿವಾಸಿಯಾಗಿರುವ ಹಾಗೂ ಪ್ರಸ್ತುತ ಗೋಕಾಕದಲ್ಲಿ ವಾಸವಾಗಿರುವ ಗಜಾನನ ಉಮರಾಣಿ ಅವರು ಈ ಕುರಿತು ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಜಾನನ ಅವರ ಮೊಬೈಲ್‌ಗೆ ಆರ್‌ಟಿಒ ಚಲನ್ ಪಾವತಿ ಸಂಬಂಧಿತ ಸಂದೇಶ ವಾಟ್ಸಾಪ್ ಮೂಲಕ ಬಂದಿತ್ತು. ಚಲನ್ ವಿವರಗಳನ್ನು ಪರಿಶೀಲಿಸುವ ನೆಪದಲ್ಲಿ ಕಳುಹಿಸಲಾದ ಎಪಿಕೆ ಫೈಲ್‌ನ್ನು ಅವರು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿದ್ದಾರೆ. ಬಳಿಕ ಮೊಬೈಲ್‌ನ ನಿಯಂತ್ರಣವನ್ನು ಸೈಬರ್ ಕಳ್ಳರು ತಮ್ಮ ಕೈಗೆ ತೆಗೆದುಕೊಂಡು ಬ್ಯಾಂಕ್ ಖಾತೆಯ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಅವರ ಖಾತೆಯಿಂದ 2,44,791ರೂ. ಹಣವನ್ನು ಅಪರಿಚಿತ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಹಣ ಕಡಿತವಾದ ಸಂದೇಶಗಳು ಬಂದ ಬಳಿಕ ತಾವು ವಂಚನೆಗೆ ಒಳಗಾಗಿರುವುದು ಗಜಾನನ ಅವರಿಗೆ ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ತನಿಖೆ ಆರಂಭಿಸಿದ್ದು, ಹಣ ವರ್ಗಾವಣೆಯಾದ ಖಾತೆಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜೊತೆಗೆ ಎಪಿಕೆ ಫೈಲ್ ಮೂಲಕ ಮೊಬೈಲ್ ಹ್ಯಾಕ್ ಮಾಡಿದ ಜಾಲದ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ್ದಾರೆ.

Total Views 65
RELATED ARTICLES

Most Popular

Recent Comments

KNN City News
Home
E-Paper