Monday, November 23, 2026
HomeBelagaviಇನ್‌ಸ್ಟಾಗ್ರಾಮ್‌ನಲ್ಲಿ ಖಾಸಗಿ ವಿಡಿಯೋ ಅಪ್ಲೋಡ್: ಕೇಸ್ ದಾಖಲು

ಇನ್‌ಸ್ಟಾಗ್ರಾಮ್‌ನಲ್ಲಿ ಖಾಸಗಿ ವಿಡಿಯೋ ಅಪ್ಲೋಡ್: ಕೇಸ್ ದಾಖಲು

 

ಬೆಳಗಾವಿ
ಇನ್‌ಸ್ಟಾಗ್ರಾಮ್‌ನಲ್ಲಿ ಬೇರೆಯವರ ಖಾಸಗಿ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಗೌಪ್ಯತೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಜಿಲ್ಲಾ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸಿಂಪಲ್ ಸ್ವೀನ್’ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಕಳೆದ ಜ. 26ರಂದು ಅಪ್ರಾಪ್ತೆಯೊಬ್ಬಳ ಹಾಗೂ ಜೋಡಿಯೊಂದರ ಖಾಸಗಿ ವಿಡಿಯೋಗಳನ್ನು ಲಿಂಕ್ ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಕೃತ್ಯದಿಂದ ಸಂತ್ರಸ್ತರ ಗೌಪ್ಯತೆಗೆ ಧಕ್ಕೆಯಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಪರಿಚಿತ ಖಾತೆದಾರರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಜಿಲ್ಲಾ ಸೈಬರ್ ಅಪರಾಧ ಠಾಣೆ ಅಧಿಕಾರಿಗಳು ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

Total Views 68
RELATED ARTICLES

Most Popular

Recent Comments

KNN City News
Home
E-Paper