Monday, November 23, 2026
HomeBelagaviರಾಯರಿಗೆ ಹುಡುಗಿಯಿಂದ ಕಾಪಾಡು ಎಂದು ಪತ್ರ ಬರೆದ ಭೂಪ

ರಾಯರಿಗೆ ಹುಡುಗಿಯಿಂದ ಕಾಪಾಡು ಎಂದು ಪತ್ರ ಬರೆದ ಭೂಪ

 

ಬೆಳಗಾವಿ
ರಾಮದುರ್ಗ ತಾಲೂಕಿನ ಪಡಕೋಟಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಚಿತ್ರ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಮಠದಲ್ಲಿ ಇತ್ತೀಚೆಗೆ ನಡೆದ ಹುಂಡಿ ಎಣಿಕೆ ಕಾರ್ಯದ ವೇಳೆ ಭಕ್ತನೊಬ್ಬ ಶ್ರೀ ರಾಘವೇಂದ್ರ ಸ್ವಾಮಿಗೆ ಬರೆದಿದ್ದ ಮನವಿ ಪತ್ರ ಪತ್ತೆಯಾಗಿದ್ದು, ಇದೀಗ ಅದು ಕುತೂಹಲಕ್ಕೆ ಕಾರಣವಾಗಿದೆ.
ಹುಂಡಿಯಲ್ಲಿದ್ದ ಕಾಣಿಕೆಗಳು ಮತ್ತು ಇತರ ವಸ್ತುಗಳೊಂದಿಗೆ ಈ ಪತ್ರವೂ ಸಿಬ್ಬಂದಿಯ ಕೈಗೆ ಸಿಕ್ಕಿದೆ. ಪತ್ರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ, “ಸ್ವಾಮೀ, ನನ್ನನ್ನು ಒಬ್ಬ ಹುಡುಗಿಯಿಂದ ಕಾಪಾಡಿ” ಎಂದು ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿರುವುದು ಕಂಡುಬಂದಿದೆ.
ಪತ್ರ ಬರೆದಿರುವ ವ್ಯಕ್ತಿಯ ಹೆಸರು, ವಿಳಾಸ ಅಥವಾ ಇತರೆ ಯಾವುದೇ ಮಾಹಿತಿ ಅದರಲ್ಲಿ ಉಲ್ಲೇಖವಾಗಿಲ್ಲ. ಹೀಗಾಗಿ ಪತ್ರ ಬರೆದವರು ಯಾರು ಎಂಬುದು ತಿಳಿದುಬಂದಿಲ್ಲ. ಆದರೆ, ಈ ಅಪರೂಪದ ಮನವಿ ಪತ್ರ ಮಠದ ಸಿಬ್ಬಂದಿ ಹಾಗೂ ಭಕ್ತರಲ್ಲೂ ಆಶ್ಚರ್ಯ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ಭಕ್ತರು ಆರೋಗ್ಯ, ಉದ್ಯೋಗ, ಶಿಕ್ಷಣ, ಮದುವೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ದೇವರಿಗೆ ಪತ್ರ ಬರೆದು ಹುಂಡಿಗೆ ಹಾಕುವುದು ಹೊಸದೇನಲ್ಲ. ಆದರೆ, “ಹುಡುಗಿಯಿಂದ ಕಾಪಾಡಿ” ಎಂದು ನೇರವಾಗಿ ಮನವಿ ಮಾಡಿರುವ ಈ ಪತ್ರ ಎಲ್ಲರ ಗಮನ ಸೆಳೆದಿದೆ.

Total Views 395
RELATED ARTICLES

Most Popular

Recent Comments

KNN City News
Home
E-Paper