Monday, November 23, 2026
HomeBelagaviಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ
ನಗರದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, 2 ಕೆಜಿ 60 ಗ್ರಾಂ ಗಾಂಜಾ, ನಗದು ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಬಂಧಿತರನ್ನು ಲಕ್ಷ್ಮೀನಗರದ ಕೌಶಿಕ ಮೊದಲಿಯಾರ (22) ಹಾಗೂ ಜ್ಯೋತಿನಗರದ ಚಂದ್ರಕಾಂತ ತಾಪಾ (19) ಎಂದು ಗುರುತಿಸಲಾಗಿದೆ. ಆರೋಪಿಗಳು ಗ್ಯಾಂಗವಾಡಿಯ ಮಂಜುನಾಥ ಎಂಬಾತನಿಂದ ಗಾಂಜಾ ತಂದು ನಗರದ ವೆಂಗುರ್ಲಾ ರಸ್ತೆ, ಗಾಂಧಿ ಸರ್ಕಲ್‌ ಸಮೀಪ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ದಾಳಿಯಲ್ಲಿ 13 ಸಾವಿರ ಮೌಲ್ಯದ 2 ಕೆಜಿ 60 ಗ್ರಾಂ ಗಾಂಜಾ, 1,730 ನಗದು ಹಾಗೂ 10 ಸಾವಿರ ಮೌಲ್ಯದ ಎರಡು ಮೊಬೈಲ್‌ ಫೋನ್‌ಗಳು ಸೇರಿದಂತೆ ಒಟ್ಟು 24,730 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Total Views 96
RELATED ARTICLES

Most Popular

Recent Comments

KNN City News
Home
E-Paper