Monday, November 23, 2026
HomeBelagaviಬೆಳಗಾವಿ ಪಾಲಿಕೆಯವರು ಸಮಸ್ಯೆಯ ಬಗ್ಗೆ ಎಂದೂ ನಮ್ಮ ಬಳಿ ಬಂದಿಲ್ಲ: ಸಚಿವ ಸತೀಶ್

ಬೆಳಗಾವಿ ಪಾಲಿಕೆಯವರು ಸಮಸ್ಯೆಯ ಬಗ್ಗೆ ಎಂದೂ ನಮ್ಮ ಬಳಿ ಬಂದಿಲ್ಲ: ಸಚಿವ ಸತೀಶ್

ಬೆಳಗಾವಿ
ನಗರದಲ್ಲಿ ಮಳೆಯಿಂದ ಹಾನಿಯಾದ ರಸ್ತೆಗಳ ಅಭಿವೃದ್ಧಿ ಮಾಡುವ ಕುರಿತು ಮಹಾನಗರ ಪಾಲಿಕೆಯಿಂದ ನಮ್ಮ ಬಳಿ ಯಾರೂ ಬರುವುದಿಲ್ಲ. ಚರ್ಚೆ ಮಾಡೋಲ್ಲ, ಕೇಳುವುದಿಲ್ಲ. ನಮಗೆ ಕೇಳಿದರೆ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದರು. ಬೆಳಗಾವಿ ನಗರದ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಅಧಿವೇಶನದ ವೇಳೆ ನಾವೇ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಕಳೆದ ಮೂರು ವರ್ಷದಿಂದ ನಮ್ಮ ರಸ್ತೆ ಅಲ್ಲದೆ ಇದ್ದರೂ ನಾವೇ ಮಾಡಿದ್ದೇವೆ. ಬಾಚಿ, ಹಳೆ ಪಿ.ಬಿ.ರಸ್ತೆ ಅಭಿವೃದ್ಧಿ ಮಾಡಿದ್ದು,ನಾವೇ. ಪಾಲಿಕೆಯವರು ಎಂದಿಗೂ ನಮ್ಮ ಬಳಿ ಸಮಸ್ಯೆ ಹೇಳಿಕೊಂಡು ಬಂದೇ ಇಲ್ಲ ಎಂದರು.
ನಗರದಲ್ಲಿ ಬೇಕಾಬಿಟ್ಟಿ ರಸ್ತೆ ಅಗೆತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾಡಳಿತದ ಕೈಯಲ್ಲಿ ಏನೂ ಇಲ್ಲ. ಮೇಯರ್ ಹಾಗೂ ಪಾಲಿಕೆ ಆಯುಕ್ತರು ನಿಯಂತ್ರಣ ಮಾಡಬೇಕು. ನಾವು ಅದನ್ನು ಅವರಿಗೆ ಕೇಳಲು ಬರುವುದಿಲ್ಲ ಎಂದರು.

Total Views 62
RELATED ARTICLES

Most Popular

Recent Comments

KNN City News
Home
E-Paper