Monday, November 23, 2026
HomeBelagaviಬಸ್ ಸೀಟ್ ಗಾಗಿ ಗಲಾಟೆ: ಪತ್ನಿ ಮೇಲೆ ಕೈ ಎತ್ತಿದ ಪತಿ

ಬಸ್ ಸೀಟ್ ಗಾಗಿ ಗಲಾಟೆ: ಪತ್ನಿ ಮೇಲೆ ಕೈ ಎತ್ತಿದ ಪತಿ

ಬೆಳಗಾವಿ
ಶಕ್ತಿ ಯೋಜನೆಯ ಪರಿಣಾಮ ಬಸ್‌ಗಳಲ್ಲಿ ಸೀಟ್‌ಗಾಗಿ ಪೈಪೋಟಿ ಹೆಚ್ಚಾಗಿರುವ ನಡುವೆಯೇ, ಸೀಟ್ ಕಾಯ್ದಿರಿಸುವ ವಿಚಾರಕ್ಕೆ ಇಬ್ಬರು ಪ್ರಯಾಣಿಕರ ನಡುವೆ ಗಲಾಟೆ ನಡೆದ ಘಟನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ಬೆಳಗಾವಿಯಿಂದ ಬೈಲಹೊಂಗಲಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಘಟನೆ ನಡೆದಿದೆ. ಚಿಕ್ಕ ಮಕ್ಕಳಿಗಾಗಿ ವ್ಯಕ್ತಿಯೊಬ್ಬರು ಮುಂಚಿತವಾಗಿ ಬ್ಯಾಗ್ ಇಟ್ಟು ಸೀಟ್ ಹಿಡಿದಿದ್ದರು. ಆದರೆ, ಆ ವ್ಯಕ್ತಿಯ ಬ್ಯಾಗ್‌ ತೆಗೆದು ಮತ್ತೊಬ್ಬ ಪ್ರಯಾಣಿಕ ಸೀಟ್‌ನಲ್ಲಿ ಕುಳಿತಿದ್ದರಿಂದ ಇಬ್ಬರ ನಡುವೆ ವಾಗ್ವಾದ ಆರಂಭಗೊಂಡಿದೆ.
‘ಮೊದಲೇ ನಾನು ಬ್ಯಾಗ್ ಇಟ್ಟು ಸೀಟ್ ಹಿಡಿದಿದ್ದೆ. ನನ್ನ ಬ್ಯಾಗ್‌ ತೆಗೆದು ನೀನು ಯಾಕೆ ಕುಳಿತೆ ಎಂದು ಪ್ರಶ್ನಿಸಿದ ವ್ಯಕ್ತಿ, ಮತ್ತೊಬ್ಬ ಪ್ರಯಾಣಿಕನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ಕೆಲವೇ ಕ್ಷಣಗಳಲ್ಲಿ ವಾಗ್ವಾದ ತಾರಕಕ್ಕೇರಿದ್ದು, ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಗಲಾಟೆ ಬಿಡಿಸಲು ಕೆಲವರು ಮುಂದಾದ ಸಂದರ್ಭದಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆಯೇ ಕೈ ಮಾಡಿದ್ದಾನೆ.

Total Views 168
RELATED ARTICLES

Most Popular

Recent Comments

KNN City News
Home
E-Paper