Monday, November 23, 2026
HomeBelagaviನಿಯಮ ಪಾಲಿಸದ ಬಡಾವಣೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ನಿಯಮ ಪಾಲಿಸದ ಬಡಾವಣೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಳಗಾವಿ
ಹಿರೇಬಾಗೇವಾಡಿ ಪಪಂ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಲ್ಲೂರ ಬಡಾವಣೆ ಹಾಗೂ ತೋಟಗಿ ಬಡಾವಣೆಗಳಲ್ಲಿ ಸರಕಾರದ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿ ಹಿರೇಬಾಗೇವಾಡಿ ಪಪಂ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳ ಪ್ರತಿಭಟನೆ ನಡೆಸಿದರು.
ಸರ್ವೇ ನಂ. 17/7ರಲ್ಲಿ 1 ಎಕರೆ 29 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕಲ್ಲೂರ ಬಡಾವಣೆಯಲ್ಲಿ ರಾಜ್ಯ ಹೆದ್ದಾರಿ ನಿಯಮಾವಳಿಗಳನ್ನು ಪಾಲಿಸಿಲ್ಲ. ಅಲ್ಲದೆ, ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಬೇಕಾದ ಜಾಗವನ್ನು ನಿಯಮಾನುಸಾರ ಕಾಯ್ದಿರಿಸಿಲ್ಲ ಎಂದು ದೂರಿದ್ದಾರೆ.
ಸರ್ವೇ ನಂ. 131/6ರಲ್ಲಿ 3 ಎಕರೆ 8 ಗುಂಟೆ 8 ಆಣೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ತೋಟಗಿ ಬಡಾವಣೆಯಲ್ಲಿಯೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಬೇಕಾದ ಜಾಗವನ್ನು ನಿಯಮಾನುಸಾರ ಬಿಡಲಾಗಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ನಿಯಮಾವಳಿಗಳನ್ನು ಪಾಲಿಸುವವರೆಗೆ ಎರಡೂ ಬಡಾವಣೆಗಳಲ್ಲಿ ಜಾಗ ಮಾರಾಟ, ಕಟ್ಟಡ ನಿರ್ಮಾಣ, ಜಾಗೆಗಳ ಉತಾರ ವಿತರಣೆ ಸೇರಿದಂತೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

Total Views 57
RELATED ARTICLES

Most Popular

Recent Comments

KNN City News
Home
E-Paper