ಕೃಷ್ಣಾ ಬಿ ಸ್ಕೀಮ್ ಯೋಜನೆಯನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಲು ರೈತ ಸಂಘಟನೆಗಳ ಆಗ್ರಹ
ಕನ್ನಡಮ್ಮ ಸುದ್ದಿ-ಕೊಪ್ಪಳ: ಚುನಾವಣಾ ಪೂರ್ವದಲ್ಲಿ ಸರ್ಕಾರ ನೀಡಿದ ಭರವಸೆಯಂತೆ ರೈತರ ಹಿತಕ್ಕಾಗಿ ಜಿಲ್ಲೆಯಲ್ಲಿ ಕೃಷ್ಣಾ ಬಿ ಸ್ಕೀಮ್ ತಕ್ಷಣ ಜಾರಿ ಮಾಡಿ, ಕೊಪ್ಪಳ,ಕುಷ್ಟಗಿ, ಯಲಬುರ್ಗಾ, ಕನಕಗಿರಿ,ಎಲ್ಲಾ ತಾಲೂಕುಗಳು ಸಂಪೂರ್ಣ ನೀರಾವರಿ ಪ್ರದೇಶಗಳನ್ನಾಗಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ರೈತ ಜನ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳ ಮುಖಂಡರು ಆಗ್ರಹ ಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ವೀರನಗೌಡ ಮಾಲಿಪಾಟೀಲ .ಜಿಲ್ಲೆಯಲ್ಲಿ ತುಂಗಭದ್ರಾ ಯೋಜನೆ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಭೂಮಿ ನೀರಾವರಿಯಾಗಿದೆ ಅಷ್ಟೇ ಅಲ್ಲದೆ,70% ವಣ ಭೂಮಿ ಇದೆ ಈ ಭೂಮಿಯ ಮಳೆಯ ಆಧಾರಿತ ಪ್ರದೇಶಗಳಾಗಿವೆ ಕೃಷ್ಣ ಬಿ ಸ್ಕೀಮ್ ಯೋಜನೆ ಹೋರಾಟ ಪ್ರಾರಂಭವಾಗಿ ಸುಮಾರು 10-12 ವರ್ಷಗಳಾಗಿವೆ ಯೋಜನೆ ಪರಿಪೂರ್ಣ ಆಗಿಲ್ಲ ಎಂದರು.
.ಈ ಯೋಜನೆ ಸಂಪೂರ್ಣ ಅನುಷ್ಠಾನವಾದರೆ, ಸುಮಾರು 2.701% ಲಕ್ಷ ಎಕರೆ ಭೂಮಿ ನೀರಾವರಿ ಪ್ರದೇಶ ಒಳಪಡಲಿವೆ, ಇದರಿಂದ ರೈತರು ಕಾರ್ಮಿಕರು ಬಡವರು ಗುಳೇ ಹೋಗುವುದು ತಪ್ಪುತ್ತದೆ ಇದರಿಂದ ಜನ ಇಲ್ಲಿ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆ ಆದಷ್ಟು ಬೇಗ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಗುರನಗೌಡ ಪಾಟೀಲ್ ರಾಜ್ಯಉಪಾಧ್ಯಕ್ಷ,ವಿಶ್ವನಾಥ ಬ್ಯಾಡಗಿ,ಕೊಪ್ಪಳ ಜಿಲ್ಲಾ ಅಧ್ಯಕ್ಷ,ಹುಲಗಪ್ಪ ಹೊಸಮನಿ, ಕಾರಟಗಿ ತಾಲೂಕ ಅಧ್ಯಕ್ಷ, ಶರಣಪ್ಪ ಗಂಗಣ್ಣ, ಗಂಗಾವತಿ ತಾಲೂಕ ಅಧ್ಯಕ್ಷ, ಶಿವು ಈಳಿಗನೂರ, ರಾಮಾಂಜನಯ್ಯ್, ಮಹಾದೇವ ಬಡಿಗೇರ, ಬಸವರಾಜ, ಹನುಮೇಶ ಹುಲಿಹೈದರ, ಇತರರು ಇದ್ದರು.
