Monday, November 23, 2026
HomeKoppalಭಾಗ್ಯನಗರ: ಬಯಲು ಶೌಚಮುಕ್ತ ಪಟ್ಟಣ ಘೋಷಣೆಗೆ ಆಕ್ಷೇಪಣೆ ಆಹ್ವಾನ : ಮುಖ್ಯಾಧಿಕಾರಿ ಸುರೇಶ ಬಬಲಾದ

ಭಾಗ್ಯನಗರ: ಬಯಲು ಶೌಚಮುಕ್ತ ಪಟ್ಟಣ ಘೋಷಣೆಗೆ ಆಕ್ಷೇಪಣೆ ಆಹ್ವಾನ : ಮುಖ್ಯಾಧಿಕಾರಿ ಸುರೇಶ ಬಬಲಾದ

ಕನ್ನಡಮ್ಮ ಸುದ್ದಿ-ಕೊಪ್ಪಳ: ಭಾಗ್ಯನಗರದಲ್ಲಿನ ಪಟ್ಟಣವನ್ನು ಎಲ್ಲಾ ಶಾಲೆಗಳಿಂದ, ಸ್ವಸಹಾಯ ಗುಂಪುಗಳಿಂದ ಮತ್ತು ಪಟ್ಟಣ ಪಂಚಾಯತಿ ಸದಸ್ಯರುಗಳಿಂದ ದೃಡೀಕರಣ ಪಡೆದು ಭಾಗ್ಯನಗರವನ್ನು ಒ.ಡಿ.ಎಫ್+ ಬಯಲು ಶೌಚಮುಕ್ತ ಪಟ್ಟಣವೆಂದು ಘೋಷಿಸಲು ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ ಎಂದು ಮುಖ್ಯಾಧಿಕಾರಿ ಸುರೇಶ ಬಬಲಾದ ತಿಳಿಸಿದ್ದಾರೆ.

ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 528 ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿ ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ ಹಾಗೂ 07 ಸಮುದಾಹಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಶೌಚಾಲಯಕ್ಕಾಗಿ ಬಯಲು ಹೋಗುವ ಸಂದರ್ಭ ಇಲ್ಲದಿರುವ ಕಾರಣ ಭಾಗ್ಯನಗರ ಪಟ್ಟಣವನ್ನು ಒ.ಡಿ.ಎಫ್+ ಬಯಲು ಶೌಚಮುಕ್ತ ಪಟ್ಟಣವನ್ನಾಗಿ ಘೋಷಿಸಲು ಯೋಗ್ಯ ಕ್ರಮಗಳನ್ನು ಈ ಮೂಲಕ ಕೈಗೊಳ್ಳಲಾಗುತ್ತಿದ್ದು,

ಈ ಕುರಿತು ಸಾರ್ವಜನಿಕರಲ್ಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ಪ್ರಕಟಗೊಂಡ 15 ದಿನಗಳೊಳಗಾಗಿ ಭಾಗ್ಯನಗರ ಪಟ್ಟಣ ಪಂಚಾಯತ ಕಾರ್ಯಲಯಕ್ಕೆ ಲಿಖಿತ ಮತ್ತು ಸೂಕ್ತ ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ  ಮುಖ್ಯಾಧಿಕಾರಿ ಸುರೇಶ ಬಬಲಾದ ತಿಳಿಸಿದ್ದಾರೆ.

ಫ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ : ಭಾಗ್ಯನಗರ ಪಟ್ಟಣ ಪಂಚಾಯತಿ ವತಿಯಿಂದ 2023-24ನೇ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಶೇ.24.10 ರ ಯೋಜನೆಯಲ್ಲಿ ಶೇ.40 ರಷ್ಟು ವ್ಯಕ್ತಿಗತ ಕಾರ್ಯಕ್ರಮದ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಫ್ರೋತ್ಸಾಹಧನ ನೀಡಲು ಅರ್ಜಿ ಅಹ್ವಾನಿಸಲಾಗಿದ್ದು, ನವೆಂಬರ್ 30 ರೊಳಗಾಗಿ ಪ.ಪಂ. ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views 18
RELATED ARTICLES

Most Popular

Recent Comments

KNN City News
Home
E-Paper