Monday, November 23, 2026
HomeKoppalಕೊಪ್ಪಳ ನಗರಸಭೆ: ಅಮ್ಜದ್‌ ಪಟೇಲ್‌ ಅಧ್ಯಕ್ಷತೆಯಲ್ಲಿನ ಸಾಮಾನ್ಯ ಸಭೆಯಲ್ಲಿ ಮೂಲಭೂತ ಸೌಲಭ್ಯ, ಅಭಿವೃದ್ಧಿ ಕೆಲಸಗಳ ಬಗ್ಗೆ...

ಕೊಪ್ಪಳ ನಗರಸಭೆ: ಅಮ್ಜದ್‌ ಪಟೇಲ್‌ ಅಧ್ಯಕ್ಷತೆಯಲ್ಲಿನ ಸಾಮಾನ್ಯ ಸಭೆಯಲ್ಲಿ ಮೂಲಭೂತ ಸೌಲಭ್ಯ, ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ

ಕನ್ನಡಮ್ಮ ಸುದ್ದಿ-ಕೊಪ್ಪಳ: ಅಮ್ಜದ್‌ ಪಟೇಲ್‌ ನಗರಸಭೆ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಸೇರಿದಂತೆ ಇತರ ಸಮಸ್ಯೆಗಳ ಪರಿಹಾರ, ಮತ್ತು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಸದಸ್ಯರು ಆಗ್ರಹಪಡಿಸಿದರು.

ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾರ್ಖಾನೆಗಳು ಹೊರ ಸೂಸುತ್ತಿರುವ ಕಪ್ಪು ಹೊಗೆ ಮತ್ತು ಅದರಿಂದ ಬರುತ್ತಿರುವ ಬೂದಿಯಿಂದಾಗಿ ಜನಜೀವನಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ನಗರಸಭೆ ಸದಸ್ಯರು, ಖಾಸಗಿ ಕಂಪನಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿರದಕ್ಕೆ ಆತಂಕ ವ್ಯಕ್ತಪಡಿಸಿ, ಕಾರ್ಖಾನೆಗಳ ದೂಳಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಠರಾವ್‌ ಪಾಸ್ ಮಾಡಲು ನಿರ್ಣಯಿಸಲಾಯಿತು. ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಚರ್ಚೆಯಲ್ಲಿ ತುಂಗಭದ್ರಾ ಜಲಾಶಯದಿಂದ ಕೊಪ್ಪಳ ಹಾಗೂ ಭಾಗ್ಯನಗರಕ್ಕೆ 19 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದ್ದರೂ ನಗರಕ್ಕೆ 16 ಎಂಎಲ್‌ಡಿಯಷ್ಟು ಮಾತ್ರ ನೀರು ಬರುತ್ತಿದೆ. ವಾರಕ್ಕೆ ಒಂದು ಸಲ ಬರುತ್ತಿದೆಯೆಂದರೆ  ಇನ್ನು ಕೆಲವರು ಮೂರ್ನಾಲ್ಕು ದಿನಗಳಿಗೊಮ್ಮೆ ಬರುತ್ತಿದೆ ಎಂಬ ಬಗ್ಗೆ ಸಭೆಯಲ್ಲಿ ಸದಸ್ಯರು ಗಮನಕ್ಕೆ ತಂದರು.  ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌, ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಎ ಪೌರಾಯುಕ್ತ ಗಣಪತಿ ಪಾಟೀಲ, ಇಇ ಮಧುರಾ, ಸ್ಥಾಯಿಸಮಿತಿ ಅಧ್ಯಕ್ಷ ಅಕ್ಬರ್‌ ಪಾಷಾ ಪಲ್ಟನ್‌ ಸೇರಿದಂತೆ ಇತರ ಸದಸ್ಯರು ಭಾಗವಹಿಸಿದ್ದರು.

Total Views 40
RELATED ARTICLES

Most Popular

Recent Comments

KNN City News
Home
E-Paper