Monday, November 23, 2026
HomeKoppalಕಲ್ಲು ಗಣಿಗಾರಿಕೆ ಗುತ್ತಿಗೆದಾರರಿಗೆ ಸುರಕ್ಷಿತವಾಗಿ ಬ್ಲಾಷ್ಟಿಂಗ್ ಮಾಡುವ ಕುರಿತು ಅರಿವು ಕಾರ್ಯಕ್ರಮ

ಕಲ್ಲು ಗಣಿಗಾರಿಕೆ ಗುತ್ತಿಗೆದಾರರಿಗೆ ಸುರಕ್ಷಿತವಾಗಿ ಬ್ಲಾಷ್ಟಿಂಗ್ ಮಾಡುವ ಕುರಿತು ಅರಿವು ಕಾರ್ಯಕ್ರಮ

ಕನ್ನಡಮ್ಮ ಸುದ್ದಿ-ಕೊಪ್ಪಳ : ಕಲ್ಲು ಗಣಿಗಾರಿಕೆ ಗುತ್ತಿಗೆದಾರರಿಗೆ ಅರಿವು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನೆಡೆದ ಕಲ್ಲುಗಣಿ ಗುತ್ತಿಗೆದಾರರಿಗೆ ಕಲ್ಲುಗಣಿ ಪ್ರದೇಶದಲ್ಲಿ ಸುರಕ್ಷಿತವಾಗಿ ಬ್ಲಾಷ್ಟಿಂಗ್ ಮಾಡುವ ಕುರಿತಾದ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.
ಜಿಲ್ಲೆಯ ಕಲ್ಲು ಗಣಿಗಾರಿಕೆ ಉದ್ಯಮವನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿದೆ, ಕಲ್ಲು ಗಣಿಗಾರಿಕೆ ಗುತ್ತಿಗೆದಾರರು ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಿಯಮಾನುಸಾರ ಗಣಿಗಾರಿಕೆ ಮಾಡಲು ಅನುಸರಿಸಬೇಕಾದ ಮಾನದಂಡಗಳ ಕುರಿತು ತಿಳಿದುಕೊಳ್ಳಬೇಕು ಎಂದರು.

ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಕಾರ್ಯನಿರ್ವಹಿಸಿಸುತ್ತಿರುವ ಕಾರ್ಮಿಕರ ಸುರಕ್ಷತೆದೊಂದಿಗೆ ಬ್ಲಾಷ್ಟಿಂಗ್ ಕೈಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸುರಕ್ಷತ ಬ್ಲಾಷ್ಟಿಂಗ್ ಕೈಗೊಳ್ಳಲು ಹಮ್ಮಿಕೊಂಡಿರುವ ಅರಿವು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಬಳ್ಳಾರಿಯ ಗಣಿ ಸುರಕ್ಷತಾ ನಿರ್ದೇಶಕರು ಗಣಿಗಳಲ್ಲಿ ಸ್ಫೋಟಕಗಳ ಸುರಕ್ಷಿತ ನಿರ್ವಹಣೆಗಳು (Safe Handling of Explosives in Mines) ಮತ್ತು ಸುರಕ್ಷತ ಬ್ಲಾಷ್ಟಿಂಗ್ ಕೈಗೊಳ್ಳುವ ಅನುಸರಿಸುವ ಕ್ರಮಗಳ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರಿಯಾಜ್ ಸೇರಿದಂತೆ ಭೂ ವಿಜ್ಞಾನಿಗಳು ಹಾಗೂ ಜಿಲ್ಲೆಯ ಕಲ್ಲುಗಣಿ ಗುತ್ತಿಗೆದಾರರು ಭಾಗವಹಿಸಿದ್ದರು.

Total Views 35
RELATED ARTICLES

Most Popular

Recent Comments

KNN City News
Home
E-Paper