ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತ್ ದಿಂದ ಆಧುನಿಕ ವಚನಗಳ ಸ್ಪರ್ಧೆಗೆ ವಚನಗಳ ಆಹ್ವಾನ : ಜಿ.ಎಸ್.ಗೋನಾಳ್
ಕನ್ನಡಮ್ಮ ಸುದ್ದಿ- ಕೊಪ್ಪಳ : ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ತಾಲೂಕ ಮತ್ತು ಜಿಲ್ಲಾ ಘಟಕ ಕೊಪ್ಪಳ ದಿಂದ ಆಧುನಿಕ ವಚನಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಕವಿಗಳು, ಬರಹಗಾರರು, ಚಿಂತಕರು, ಮತ್ತು ಆಧುನಿಕ ವಚನ ರಚನೆಕಾರರು. ತಮ್ಮ ಸ್ವರಚಿತ ಮೂರು ಆಧುನಿಕ ವಚನಗಳನ್ನು ಕಳಿಸಲು ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ .ಜಿ.ಎಸ್. ಗೋನಾಳ್ ಕೋರಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಕವಿಗಳು ತಮ್ಮ ಸ್ವರಚಿತ ಮೂರು ಆಧುನಿಕ ವಚನಗಳನ್ನು ಮತ್ತು ತಮ್ಮ ಭಾವಚಿತ್ರ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ದಿನಾಂಕ 04/01/2025 ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಲು ವಿನಂತಿಸಲಾಗಿದೆ. ಜಿ.ಎಸ್. ಗೋನಾಳ್, ಅಧ್ಯಕ್ಷರು, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ.
Total Views 69


ಶ್ರೀ ಬಸವ ಸದನ ಪದಕಿ ಕಾಲೋನಿ. 21ನೇ ವಾರ್ಡ್ ಶಾರದಾ ಸ್ಕೂಲ್ ಹತ್ತಿರ, 6ನೇ ಕ್ರಾಸ್, ಕೊಪ್ಪಳ. ಅಥವಾ ಡಾ. ಶಿವಬಸಪ್ಪ ಮಸ್ಕಿ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ. ಬಿ.ಟಿ.ಪಾಟೀಲ ನಗರ, 2ನೇ ಕ್ರಾಸ್, ಗಣೇಶ ದೇವಸ್ಥಾನದ ಹತ್ತಿರ, ಕೊಪ್ಪಳ. ಇಲ್ಲಿಗೆ ಹೆಚ್ಚಿನ ಮಾಹಿತಿಗಾಗಿ 9448025067, 9449916156. ಸಂಪರ್ಕಿಸಲು ಕೋರಲಾಗಿದೆ.