Monday, November 23, 2026
HomeKoppalಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ :ರಾಷ್ಟ್ರೀಯ ಗಣಿತ ದಿನಾಚರಣೆ

ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ :ರಾಷ್ಟ್ರೀಯ ಗಣಿತ ದಿನಾಚರಣೆ

ಕನ್ನಡಮ್ಮ ಸುದ್ದಿ-ಕೊಪ್ಪಳ : ಅಂಕಗಣಿತ, ಬೀಜಗಣಿತ, ರೇಖಾಗಣಿತದ ಬಗ್ಗೆ, ಗಣಿತ ವಿಷಯಕ್ಕೆ ಶ್ರೀನಿವಾಸ್ ರಾಮಾನುಜನ್ ಅವರ ಕೊಡುಗೆಳು ಅಪಾರವೆಂದು ಉಪನ್ಯಾಸಕಿ ರಾಧಾರಾಣಿ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಮ್ಮಿಕೊಂಡ ರಾಷ್ಟ್ರೀಯ ಗಣಿತ ದಿನಾಚರಣೆಯ ಅಂಗವಾಗಿ ನಡೆದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀರೋ ಮತ್ತು ಅನಂತದ ಮತ್ತು  ಗಣಿತದಲ್ಲಿ ಭಾರತೀಯರ ಕೊಡುಗೆಗಳ ಬಗ್ಗೆ ವಿವರಿಸಿದರು.

ವಿಜ್ಞಾನ ಕೇಂದ್ರದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಸಿದ್ಧಲಿಂಗೇಶ್ ಹಮ್ಮಿಗಿ, ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಮಾತನಾಡಿದರು. ಡಯಟ್ ನ ಉಪನ್ಯಾಸಕ ಶೇಖರ್ ಸರ್, ಪ್ರಭಾರಿ ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ಪ್ರಕಾಶ್ ತಗಡಿನಮನಿ, ಸಯ್ಯದ್ ಮೆಹಬೂಬ್ ಹುಸೇನ್, ಹನುಮರಡ್ಡಿ ಹಳ್ಯಾಳ, ಕನಕಪ್ಪ ಶ್ರೀ ಶೇಖರ್ ಅಂಕದ್, ನಜೀರ್ ಅಹ್ಮದ್, ಶರಣಬಸನಗೌಡ್ರು, ಕ್ಯೂರೇಟರ್ ಮೈಲಾರಪ್ಪ, ಫಕೀರಸಾಬ್, ಸುಮಂಗಲಾ, ಮಹಾಲಿಂಗಪ್ಪ ಸೇರಿದಂತೆ ಸಿಬ್ಬಂದಿಗಳಾದ ಫಕೀರಸಾಬ್, ಮಹಾಲಿಂಗಪ್ಪ, ಶಂಕ್ರಪ್ಪ, ಪೂಜಾ, ರಾಜಾಭಕ್ಷಿ, ನಬೀಲ್ ಪಾಷ ಇತರರು ಪಾಲ್ಗೊಂಡಿದ್ದರು.

Total Views 15
RELATED ARTICLES

Most Popular

Recent Comments

KNN City News
Home
E-Paper