ಕನ್ನಡಮ್ಮ ಸುದ್ದಿ-ಕೊಪ್ಪಳ : ಲಯನ್ಸ್ ಡೇ ಕೇರ್ ಸೆಂಟರ್’ ಡಿ. 27 ಶುಕ್ರವಾರ ಕೊಪ್ಪಳ ನಗರದಲ್ಲಿ ಉದ್ಘಾಟನೆಯಾಗುತ್ತಿದೆ ಎಂದು ಕೊಪ್ಪಳ ಲೈನ್ಸ್ ಕ್ಲಬ್ ಸಂಸ್ಥೆಯ ಮುಖ್ಯಸ್ಥ ಬಸವರಾಜ್ ಬಳ್ಳೊಳ್ಳಿ ಹೇಳಿದರು.
ಅವರು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ತನ್ನ 49 ನೇ ವರ್ಷದ ಸೇವಾ ಸಾರ್ಥಕ್ಯದಲ್ಲಿ ಮುನ್ನಡೆಯುತ್ತಿದೆ. ಎರಡು ಶಾಲೆಗಳು, ಕಣ್ಣಿನ ಆಸ್ಪತ್ರೆ, ಡಯಲಿಸಿಸ್ ಸೆಂಟರ್ ಲಯನ್ಸ್ ಕ್ಲಬ್‌ನ ತಾಶ್ವತ ಅಂಗ ಸಂಸ್ಥೆಗಳು, ಈ ಅಂಗ ಸಂಸ್ಥೆಗಳಿಗೆ ಮತ್ತೊಂದು ಅಂಗ ಸಂಸ್ಥೆಯಾಗಿ ಲಯನ್ಸ್ ಕ್ಲಬ್‌ನ ಚಾರ್ಟರ್ ಸದಸ್ಯರು, ಹಿರಿಯ ಮಾರ್ಗದರ್ಶಕರೂ ಆಗಿದ್ದ ಲಿಂಗೈಕ್ಯ ಲಯನ್ ಮಲ್ಲಿಕಾರ್ಜುನ ಸೋಮಲಾಪುರ ಅವರ ಸ್ಮರಣಾರ್ಥ ಈ ಲಯನ್ಸ್ ಡೇ ಕೇರ್ ಸೆಂಟರ್ ಕಾರ್ಯಾರಂಭ ಮಾಡಲಿದೆ ಎಂದರು.
ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಇವರು ಲಯನ್ಸ್ ಡೇ ಕೇರ್ ಸಂಕೀರ್ಣದ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಎಂ.ಜೆ.ಎಫ್. ಲಯನ್ ಮನೋಜ ಎಲ್. ಮಾನೇಕ್ ಮತ್ತು ಲಯನ್ಸ್ ಕ್ಲಬ್‌ನ ಇನ್ನಿತರ ಉನ್ನತಾಧಿಕಾರಿಗಳಾದ ಲಯನ್ ಡಾ. ರವಿ ಎಲ್. ನಾಡಿಗೇರ, ಡಾ. ಆನಂದ ಹೋಟೀಸ್, ಲಯನ್ ಸುಗ್ಗಲಾ ಯಳಮಲಿ ಸೇರಿದಂತೆ ಲಯನ್ಸ್ ಕ್ಲಬ್‌ನ ಎಲ್ಲ ಸದಸ್ಯರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಹುಪಯುಕ್ತವಾದ ಕೇರ್ ಸೆಂಟರ್ ಇದು, ಬಹುಶಃ ಇದು ಈ ಭಾಗದಲ್ಲಿ ಮೊದಲ ಪ್ರಯತ್ನ. ಬಡಜನರಿಗೆ ಮತ್ತು ಅವಶ್ಯಕತೆ ಇರುವವರಿಗೆ ಸುಲಭವಾಗಿ ಆರೋಗ್ಯದ ಸೌಲಭ್ಯಗಳು ಇಲ್ಲಿ ದೊರೆಯುತ್ತವೆ, ವಿವಿಧ ರೋಗಗಳ ತಜ್ಞರಿಂದ ಹೊರರೋಗಿ ವಿಭಾಗದಲ್ಲಿ ಪ್ರತಿದಿನ ಇಲ್ಲಿ ವೈದ್ಯಕೀಯ ಸೇವೆಗಳು, ಮಂಗಳವಾರ ಮತ್ತು ಗುರುವಾರ ಕಾನ್ಸರ್, ಡರ್ಮಟಾಲಾಜಿಸ್ಟ್, ಜನರಲ್ ಸರ್ಜನ್, ಇ.ಎನ್.ಟಿ. ತಜರ ವಿಶೇಷ ಸಮಾಲೋಚನೆ ನಡೆಸಲಾಗುತ್ತದೆ ಎಂದು ಕಾರ್ಯದರ್ಶಿ ಪ್ರದೀಪ್ ಸೋಮಲಾಪುರ್ ಹೇಳಿದರು,
ಈ ಸಂದರ್ಭದಲ್ಲಿ ಲೈನ್ಸ್ ವೆಂಕಟೇಶ್ ಸಾನ್ಬಾಳ್, ಲೈನ್ಸ್ ಕ್ಲಬ್ ಅಧ್ಯಕ್ಷರಾದ ಪರಮೇಶ್ವರಪ್ಪ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಬಹುಪಯೋಗಿಯಾಗಿರುವ ಲಯನ್ಸ್ ಡೇ ಕೇರ್ ಸೆಂಟರ್ನ ಉಪಯುಕ್ತತೆ ಹಾಗೂ ಸಣ್ಣ ಶಸ್ತ್ರಚಿಕಿತ್ಸೆಗಳು, ಕೀಮೋಥೆರಪಿ, ಎಂಡೋಸ್ಕೋಪಿ, ಆ್ಯಂಟಿ ಬಯೋಟಿಕ್ ಚಿಕಿತ್ಸೆ, ಬ್ಲಡ್ ಟ್ರಾನ್ಸ್ ಪ್ಯೂಜನ್ ನಂತಹ ಸೇವೆಗಳನ್ನು ಬಡಜನಸ್ನೇಹಿ ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು,
