Monday, November 23, 2026
HomeKoppalಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ : ಕನಕಗಿರಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಸಚಿವ ಶಿವರಾಜ...

ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ : ಕನಕಗಿರಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಸಚಿವ ಶಿವರಾಜ ತಂಗಡಗಿ

* ಕನಕಗಿರಿ ಉಪನೋಂದಣಾಧಿಕಾರಿ ಕಚೇರಿ 28ಕ್ಕೆ ಕಾರ್ಯಾರಂಭ ||   ₹ 15‌ ಕೋಟಿ ವೆಚ್ಚದಲ್ಲಿ ಪ್ರಜಾಸೌಧ (ಮಿನಿ ವಿಧಾನಸೌಧ) ₹ 42 ಕೋಟಿ ವೆಚ್ಚದಲ್ಲಿ 100 ಬೆಡ್ ಆಸ್ಪತ್ರೆ‌ ಕಟ್ಟಡ , ತೇರಿನ‌ಮನೆ ನಿರ್ಮಾಣಕ್ಕೆ ₹17.78 ಲಕ್ಷ , ಕನಕಾಚಲಪತಿ ದೇಗುಲದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ₹50 ಲಕ್ಷ  ಸೇರಿ ಮಂಜೂರಿ || ನಾನು ಗುದ್ದಲಿ ಪೂಜೆಗೆ ಸೀಮಿತನಾದ ವ್ಯಕ್ತಿ ಅಲ್ಲ :ಸಚಿವ ತಂಗಡಗಿ ||

ಕನ್ನಡಮ್ಮ ಸುದ್ದಿ-ಕನಕಗಿರಿ: ಪಟ್ಟಣದ ಸೌಂದರೀಕರಣ ಹಾಗೂ ಅಭಿವೃದ್ದಿಗೆ ಒತ್ತು ನೀಡುವುದು ನನ್ನ ಯೋಜನೆಯಾಗಿದ್ದು, ಇದಕ್ಕೆ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರು ಸಹಕರಿಸುವುಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕನಕಗಿರಿ ಶಾಸಕರು ಆಗಿರುವ ಶಿವರಾಜ ತಂಗಡಗಿ ಹೇಳಿದರು. ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಮಾದರಿ ಪಟ್ಟಣ ನಿರ್ಮಾಣ ಮಾಡಲಾಗುವುದು. ಪ್ರತಿಯೊಬ್ಬ ಸದಸ್ಯರು ಅಧಿಕಾರಿಗಳ ವರ್ಗ ಸಾರ್ವಜನಿಕರಿಗೆ ಉತ್ತಮವಾಗಿ ಸೇವೆ ಒದಗಿಸಬೇಕು.  ಹಣ ಪಡೆದು ಫಾರ್ಮ್ ನಂಬರ್ -3 ದಾಖಲೆ ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರತಿಯೊಂದು ವಾರ್ಡ್‌ಗಳಲ್ಲಿ ಶುದ್ದ ಕುಡಿಯುವ ನೀರು, ಸಿಮೆಂಟ್ ಕಾಂಕ್ರಿಟ್, ಚರಂಡಿ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರಿಗೆ ಅವಶ್ಯಕವಿರುವ ಇತರೆ ಮೂಲ ಸೌಕರ್ಯಗಳನ್ನು ಒದಗಿಸುವ ಕಡೆಗೆ ಅಧಿಕಾರಿಗಳು ಗಮನ ಹರಿಸಲು ಹಾಗೂ ಪಟ್ಟಣ ಪಂಚಾಯಿತಿ ಕಚೇರಿಯ ಹೊಸ ಕಟ್ಟಡ ನಿರ್ಮಾಣಕ್ಕೆ ತೊಂಡಿತೇವರಪ್ಪ ದೇವಸ್ಥಾನ ಬಳಿ ಜಾಗ ಗುರುತಿಸಲಾಗಿದೆ. ಈ ಕುರಿತು ಪಟ್ಟಣ ಪಂಚಾಯಿತಿ ಸದಸ್ಯರ ಅಭಿಪ್ರಾಯ ಏನು ಎಂದು ಕೇಳಿದಾಗ ಎಲ್ಲಾರೂ ಒಪ್ಪಿಗೆ ಸೂಚಿಸಿದರು.

ಕೆಲ ಕಿಡಿಗೇಡಿಗಳಿಂದ ಪಟ್ಟಣದ ವಾತಾವರಣ ಹಾಳಾಗುತ್ತಿದ್ದು, ಪ್ರಮುಖ ವೃತ್ತಗಳಿಗೆ, ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕೆಕೆಆರ್‌ಡಿಬಿ ವತಿಯಿಂದ ₹ 90 ಲಕ್ಷ ಮೀಸಲಿಡಲಾಗಿದೆ , ಪಟ್ಟಣದ 17 ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಿಸುವುದು, ಪೂರ್ಣ ಪ್ರಮಾಣದ ಚರಂಡಿ ವ್ಯವಸ್ಥೆ ಮಾಡುವಂತೆ ನಕಾಶೆ ತಯಾರಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಲಕ್ಷ್ಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಿದರೂ ಜನರು ಮಳಿಗೆ ಬಾಡಿಗೆ ತೆಗೆದುಕೊಳ್ಳಲು ಬರುತ್ತಿಲ್ಲ. ಇದರಿಂದ ಆದಾಯ ಇಲ್ಲವಾಗಿದೆ, ಇನ್ನು ಪಟ್ಟಣದ ಶುದ್ದ ಕುಡಿಯುವ ನೀರಿನ ಘಟಕಗಳ ಏಜೆನ್ಸಿ ಅವಧಿ ಮುಗಿದಿದ್ದು, ಟೆಂಡರ್ ಪ್ರಕ್ರಿಯೆಗೆ ಚಾಲನೆ‌ ನೀಡಲಾಗುವುದು ಎಂದು ತಿಳಿಸಿದರು. ಪ.ಪಂ. ಅಧ್ಯಕ್ಷೆ ಹುಸೇನಬೀ ಚಳ್ಳಮರದ್, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಪ.ಪಂ ಸದಸ್ಯರು, ನಗರ ಆಶ್ರಯ ಸಮಿತಿ ಸದಸ್ಯರು ಇದ್ದರು.

ಕನಕಗಿರಿ ಉಪನೋಂದಣಾಧಿಕಾರಿ ಕಚೇರಿ 28ಕ್ಕೆ ಕಾರ್ಯಾರಂಭ : ಕನಕಗಿರಿ: ತಾಲ್ಲೂಕಿನ ಜನರ ಬಹು ದಿನಗಳ ಬೇಡಿಕೆಯಾದ ಉಪ ನೋಂದಣಾಧಿಕಾರಿ ಕಚೇರಿಯನ್ನು ಡಿಸೆಂಬರ್‌ 28ರಂದು ಆರಂಭಿಸಲಾಗುವುದು, ಗಂಗಾವತಿ-ಲಿಂಗಸೂರು ರಸ್ತೆಯಲ್ಲಿ ತಬ್ರೇಜ್ ಬಳ್ಳಾರಿ ಅವರು ದಾನವಾಗಿ ನೀಡಿದ ಜಾಗದಲ್ಲಿ ಪ್ರಜಾಸೌಧ (ಮಿನಿ ವಿಧಾನಸೌಧ) ನಿರ್ಮಾಣ ಮಾಡಲಾಗುತ್ತಿದ್ದು ಜಾಗ ಸರ್ಕಾರದ ಹೆಸರಿಗೆ ವರ್ಗಾವಣೆ ಆಗಿದೆ. ಕಟ್ಟಡ‌ ನಿರ್ಮಾಣಕ್ಕೆ ₹ 15‌ ಕೋಟಿ‌  ಬಿಡುಗಡೆಯಾಗಿದೆ. ಕಲ್ಮಠದ ಜಾಗದಲ್ಲಿ₹ 42 ಕೋಟಿ ವೆಚ್ಚದಲ್ಲಿ 100 ಬೆಡ್ ಆಸ್ಪತ್ರೆ‌ ಕಟ್ಟಡ ನಿರ್ಮಾಣ , ಬಸ್ ಡಿಪೊ, ಅಗ್ನಿಶಾಮಕ ದಳ ಕಚೇರಿ ನಿರ್ಮಾಣಕ್ಕೂ ಜಾಗ ಗುರುತಿಸಲಾಗಿದೆ. ತೇರಿನ‌ಮನೆ ನಿರ್ಮಾಣಕ್ಕೆ ₹17.78 ಲಕ್ಷ ಮಂಜೂರು ಆಗಿದೆ. ಕನಕಾಚಲಪತಿ ದೇಗುಲದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ₹50 ಲಕ್ಷ  ನೀಡಲಾಗಿದೆ. ಪಟ್ಟಣದಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ಮಂಜೂರು ಆಗಿದೆ. ಈ ಹಿಂದೆ ತಾಲ್ಲೂಕು ಕೇಂದ್ರವಾಗದಿದ್ದರೂ ರಾಜ್ಯದಲ್ಲಿಯೆ ಪ್ರಥಮವಾಗಿ ಕಾರಟಗಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ ಆರಂಭಿಸಿದ್ದು ನಾನೇ, ತಾವು ಚುನಾವಣೆಯಲ್ಲಿ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ಗುದ್ದಲಿ ಪೂಜೆಗೆ ಸೀಮಿತನಾದ ವ್ಯಕ್ತಿ ಅಲ್ಲ ಎಂದು  ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

Total Views 65
RELATED ARTICLES

Most Popular

Recent Comments

KNN City News
Home
E-Paper