Monday, November 23, 2026
HomeKoppalಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ :  ಜ.6ರಂದು ಕೊಪ್ಪಳ ಬಂದ್‌ :...

ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ :  ಜ.6ರಂದು ಕೊಪ್ಪಳ ಬಂದ್‌ : ಹನುಮೇಶ್ ಕಡೆಮನಿ

ಕನ್ನಡಮ್ಮ ಸುದ್ದಿ-ಕೊಪ್ಪಳ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ ಬಿ.ಆ‌ರ್. ಅಂಬೇಡ್ಕ‌ರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಜನವರಿ 6 ರಂದು ಕೊಪ್ಪಳ ಬಂದ್ ಗೆ ಕರೆ ನೀಡಲಾಗಿದೆ ಅಂದು ಸಾರಿಗೆ ಸಂಚಾರ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಸಮಿತಿ ಮುಖಂಡರಾದ ಹನುಮೇಶ್ ಕಡೆಮನಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಮಿತಾ ಶಾ ರನ್ನು ಸಚಿವ ಸಂಪುಟದಿಂದ ವಜಾ ಮಾಡಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಕೊಪ್ಪಳ ಬಂದ್ ಗೆ ಅಹಿಂದ, ಅಲ್ಪ ಸಂಖ್ಯಾತರ ಸಂಘಟನೆಗಳು ಹಾಗೂ ಬಿ.ಆ‌ರ್.ಅಂಬೇಡ್ಕ‌ರ್ ಅವರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಬಂದ್ ದಿನ ಸಾರಿಗೆ ಸಂಚಾರ ಹಾಗೂ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್‌ ಆಗಲಿದೆ, ಈಗಾಗಲೇ ವ್ಯಾಪಾರಸ್ಥರೊಂದಿಗೆ ಚರ್ಚಿಸಲಾಗಿದೆ ಬಂದ್ ಗೆ ಸಹಕಾರ ನೀಡಲಿದ್ದಾರೆ ಎಂದರು. ಅಂದು ಬೆಳಿಗ್ಗೆ 7 ರಿಂದ 8:30ರ ವರೆಗೆ ಬೈಕ್ ರಾಲಿ ನಗರದ ತಾಲೂಕ ಕ್ರೀಡಾಂಗಣದಿಂದ ಅಂಬೇಡ್ಕರ್ ಸರ್ಕಲ್, ಗಡಿಯಾರ ಕಂಬದ ಮೂಲಕ ಅಶೋಕ ಸರ್ಕಲ್ ಗೆ ಪ್ರತಿಭಟನಾ ಮೆರವಣಿಗೆ ಆಗಮಿಸಿ ಬಹಿರಂಗ ಸಭೆ ನಡೆಯುತ್ತದೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು, ಅಂದು ಬಂದ್ ಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಮುಖಂಡರಾದ ಜಿ.ಎಂ ಬೆಲ್ಲದ್, ಸಾವಿತ್ರಿ ಮುಜಂದಾರ್, ರಾಮಣ್ಣ ಚೌಡಿಕಿ, ಯಮನೂರಪ್ಪ ನಾಯಕ್,ಕಾಶಪ್ಪ ಚಲವಾದಿ,ಪರಶುರಾಮ್ ಕೆರೆಹಳ್ಳಿ, ಸಲೀಂ ಅಳವಂಡಿ, ಮಾನ್ವಿ ಪಾಶ, ಸಂಜಯ್ ದಾಸ್, ಹುಲುಗಪ್ಪ ಹಾಟಿ, ಇತರರು ಇದ್ದರು.

Total Views 86
RELATED ARTICLES

Most Popular

Recent Comments

KNN City News
Home
E-Paper