ಕೊಪ್ಪಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಪ್ಪಳ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕೊಪ್ಪಳ ಕ್ರಾಂತಿ ದಿನ ಪತ್ರಿಕೆ ಸಂಪಾದಕರಾದ ಹನುಮಂತ ಹಳ್ಳಿಕೇರಿ ಹಲಗೇರಿ ಅವರು ಆಯ್ಕೆಗೊಂಡಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಬಸವರಾಜ್ ಗುಡ್ಲಾನೂರ್ ರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾ ಕೇಂದ್ರ ಸ್ಥಾನ ದ ಉಪಾಧ್ಯಕ್ಷರಾಗಿದ್ದ ಹನುಮಂತ್ ಹಳ್ಳಿಕೇರಿ ಅವರನ್ನು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿ ಸದಸ್ಯರ ತುರ್ತು ಸಭೆಯಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ನಾಗರಾಜರವರು ವಿಷಯ ಮಂಡಿಸಿದಾಗ ಸಂಘದ ಜಿಲ್ಲಾ ಖಜಾಂಚಿ ಆಗಿರುವ ರಾಜು ಬಿಆರ್ ರವರು ತೆರುವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಹನುಮಂತ ಹಳ್ಳಿಕೇರಿ ಅವರ ಹೆಸರು ಸೂಚಿಸಿದರು. ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಎಂ ಸಾಧಿಕ ಅಲ್ಲಿ ಯವರು ಅನುಮೋದಿಸಿದರು ಸಭೆಯಲ್ಲಿ ಉಪಸ್ಥಿತರಿದ್ದ ಇತರ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು ಇದಕ್ಕೆ ಸರ್ವಾನು ಮತದ ಒಪ್ಪಿಗೆ ಸೂಚಿಸಿದರು,
ನೂತನ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತುಮಕೂರು ನಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನ ದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರೆಲ್ಲರೂ ಪಾಲ್ಗೊಳ್ಳುವ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು, ಸಂಘದ ಪತ್ರಿಕಾ ಭವನ ಟ್ಟಡ ಸೇರಿದಂತೆ ಇತರ ಅಭಿವೃದ್ಧಿ ಪರ ಎಲ್ಲಾ ಕೆಲಸಗಳನ್ನು ಕೂಡಲೇ ಕೈಗೊಂಡು ಪೂರ್ಣಗೊಳಿಸಲು ಚರ್ಚೆ ನಡೆಯಿತು, ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಬಸವರಾಜ್ ಗುಡ್ಲಾನೂರ್, ರಾಜ್ಯ ಕಾರ್ಯಕಾರಣಿ ವಿಶೇಷ ಆಹ್ವಾನಿತ ಸದಸ್ಯ ಎಚ್ಎಸ್ ಹರೀಶ್, ರಾಷ್ಟ್ರೀಯ ಮಂಡಳಿ ಸದಸ್ಯ ಜಿಎಸ್ ಗೋನಾಳ ಗ್ರಾಮೀಣ ಉಪಾಧ್ಯಕ್ಷ ವೆಂಕಟೇಶ್ ಕುಲಕರ್ಣಿ, ಆರ್ ಬಿ ಪಾಟೀಲ್ ಪತ್ರಿಕಾ ಭವನ್ ಕನ್ನಡ ಸಮಿತಿ ಅಧ್ಯಕ್ಷ ಎನ್ಎಂ ದೊಡ್ಡಮನಿ, ಜಿಲ್ಲಾ ಕಾರ್ಯದರ್ಶಿ ವೀರಣ್ಣ ಕಳ್ಳಿಮನಿ ಮಂಜುನಾಥ್ ಅಂಗಡಿ ಸೇರಿದಂತೆ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್ ಕೋಳೂರು ಚಂದ್ರು ಮರಕುಂಪಿ ವಿಶ್ವನಾಥ್ ಬಳಗಲ ಮಠ, ಶಿವಪ್ಪ ನಾಯಕ್, ಮಂಜುನಾಥ್ ಕುಕನೂರ್ ,ಗಂಗಾವತಿ ತಾಲೂಕ ಅಧ್ಯಕ್ಷ ನಾಗರಾಜು ಇಂಗಳಗಿ, ಕುಕನೂರು ತಾಲೂಕ ಅಧ್ಯಕ್ಷ ನಾಗರಾಜ್ ಬೆಣಕಲ್ ಕುಷ್ಟಗಿ ತಾಲೂಕ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಪಲ್ಲೆದ ಸೇರಿದಂತೆ ಇತರರು ಇದ್ದರು. ಬಳಿಕ ನೂತನ ಅಧ್ಯಕ್ಷ ಹನುಮಂತ ಹಳ್ಳಿಕೇರಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
