Monday, November 23, 2026
HomeKoppalಜಾತ್ರೆಯ ಕಾರ್ಯಕ್ರಮ ಜನರಿಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ದೊಡ್ಡದು; ಡಾ. ಜಿ. ಸುರೇಶ

ಜಾತ್ರೆಯ ಕಾರ್ಯಕ್ರಮ ಜನರಿಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ದೊಡ್ಡದು; ಡಾ. ಜಿ. ಸುರೇಶ

*ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಾಧ್ಯಮ ಕೇಂದ್ರ ಉಧ್ಘಾಟನೆ

ಕನ್ನಡಮ್ಮ ಸುದ್ದಿ-ಕೊಪ್ಪಳ: ದಕ್ಷೀಣ ಭಾರತದ ಕುಂಭಮೇಳವೆಂದು ಪ್ರಖ್ಯಾತಗೊಂಡಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಅತೀ ಹೆಚ್ಚು ಜನರು ಸೇರುವುದು ಜಾತ್ರೆಯ ಬಹುಮುಖ್ಯ ವಿಶೇಷತೆಯಾಗಿದೆ ಎಂದು ಕೊಪ್ಪಳ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಜಿ. ಸುರೇಶ ಹೇಳಿದರು.

ನಗರರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2025ರನಿಮಿತ್ಯ ಹಮ್ಮಿಕೊಂಡ ಮಾಧ್ಯಮ ಕೇಂದ್ರ ಉಧ್ಘಾಟಿಸಿ ಮಾತನಾಡಿದರು.

ಗವಿಸಿದ್ಧೇಶ್ವರ ಜಾತ್ರೆ ಉತ್ತರ ಕರ್ನಾಟಕದಲ್ಲಿ ಅಷ್ಟೆ ಅಲ್ಲದೆ ದೇಶ-ವಿದೇಶಗಳಲ್ಲಿ  ಪ್ರಖ್ಯಾತಿಯನ್ನು ಪಡೆದಿದೆ, ಜಾತ್ರೆಯ ಎಲ್ಲ ಧಾರ್ಮಿಕ, ಸಂಪ್ರದಾಯಿಕ ಹಾಗೂ ಸಮಾಜಿಕ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವುವಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು ಎಂದರು.

ಮಹಾವಿದ್ಯಾಲಯದ ಪಾಚಾರ್ಯರಾದ ಡಾ. ಚನ್ನಬಸವ ಸಾಹುಕಾರ್ ಮಾತನಾಡಿ ಜಾತ್ರಾ ಸಮಯದಲ್ಲಿ ಜರಗುವ ವಿವಿಧ ಕಾರ್ಯಕ್ರಮಗಳ ಮಾಹಿತಿ ಜನರಿಗೆ ತಲುಪಿಸುವ ಮಾಧ್ಯಮದಿಂದ ಹೆಚ್ಚು ಪ್ರಚಾರ ಸಿಕ್ಕಿದೆ, ಈ ಭಾಗದ ಧಾರ್ಮಿಕ, ಸಾಂಸ್ಕೃತಿಕ, ಕಲೆ ಪರಂಪರೆ, ಇತಿಹಾಸ ಹಾಗೂ ಜಾತ್ರೆಯ ಮಹತ್ವವನ್ನು ನಾಡಿಗೆ ಬಿತ್ತರಿಸುವ ಕೆಲಸವನ್ನು ಮಾಧ್ಯಗಳು ಮಾಡುತ್ತಿವೆ ಎಂದರು.ಉಪನ್ಯಾಸಕ ಗಂಗಾಧರ ಸೊಪ್ಪಿಮಠ ಸ್ವಾಗತಿಸಿ, ನಿರೂಪಿಸಿದರು.   ಉಪನ್ಯಾಸಕ ಡಾ.ನಾಗರಾಜ ದಂಡೂತಿ, ಮಾಧ್ಯಮ ಸಮಿತಿಯ ಜಯಸಿಂಹ ಆಚಾರ್, ಡಾ. ಪ್ರಕಾಶ ಬಳ್ಳಾರಿ, ಸೇರಿದಂತೆ ವಿವಿಧ ಪತ್ರಿಕಾ ಮತ್ತು ದೂರದರ್ಶನ ಮಾಧ್ಯಮದವರು ಉಪಸ್ಥಿತರಿದ್ದರು.

Total Views 20
RELATED ARTICLES

Most Popular

Recent Comments

KNN City News
Home
E-Paper