ಕನ್ನಡಮ್ಮ ಸುದ್ದಿ-ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನೇವರಿ 16ರಂದು ರಾತ್ರಿ 9-30 ಗಂಟೆಗೆ ಸಂಪೂರ್ಣ ರಾಮಾಯಣ ಬಯಲಾಟವು ಜೆ.ಪಿ. ಮಾರುಕಟ್ಟೆಯ ಹತ್ತಿರ ಡಾ.ಬಾಬು ಜನಜೀವನ ರಾಮ್ ವೃತ್ತದ ಬಳಿ ಉಚಿತವಾಗಿ ಪ್ರದರ್ಶನ ಗೊಳ್ಳಲಿದೆ ಎಂದು ಕಲಾವಿದ ಹಾಗೂ ಪತ್ರಕರ್ತ ನಿಂಗಪ್ಪ ದೊಡ್ಡಮನಿ ಹೇಳಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶ್ರೀ ಬಸವೇಶ್ವರ ನಗರದ ಶ್ರೀ ಮಾರುತೇಶ್ವರ ಬಯಲಾಟ ( ದೊಡ್ಡಾಟ) ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವು ಮಾದಿಗ ಸಮಾಜದ ಹಿರಿಯರು ಸುಮಾರು 55-60 ವರ್ಷ ಗಳಿಂದ ವಿವಿಧ ಬಯಲಾಟದ ಕಥೆಗಳನ್ನು ಉಚಿತವಾಗಿ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಅದನ್ನು ಇಂದು ಕೂಡ ಸಮಾಜದ ಕಲಾವಿದರು, ಹಿರಿಯರು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು.
ಈ ಬಯಲಾಟದಲ್ಲಿ ಪುರುಷ ಪಾತ್ರಗಳನ್ನು ಮತ್ತು ಸ್ತ್ರೀ ಪಾತ್ರಗಳನ್ನೂ ಸಹ ಪುರುಷರೇ ನಿರ್ವಹಣೆ ಮಾಡುತ್ತಿರುವುದು, ಶ್ರೀರಾಮಚಂದ್ರ-ಸೀತಾದೇವಿ ಪಾತ್ರ ಸಂಪೂರ್ಣ ರಾಮಾಯಣ ಬಯಲಾಟದಲ್ಲಿ ಸಹೋದರರು, ಶ್ರೀರಾಮಚಂದ್ರ ಸೀತಾದೇವಿಯಾಗಿ ಅಭಿನಯಿಸುತ್ತಿದ್ದು ಇದು ಈ ಬಯಲಾಟದಲ್ಲಿ ವಿಶೇಷ. ಶ್ರೀರಾಮಚಂದ್ರನಾಗಿ ನಿಂಗಪ್ಪ ದೊಡ್ಡಮನಿ, ಸೀತಾದೇವಿಯಾಗಿ ರಾಜಶೇಖರ ದೊಡ್ಡಮನಿ ಸೋದರರು ಅಭಿನಯಿಸುತ್ತಿದ್ದು ಇದು ವಿಶೇಷ ಎಂದು ಹೇಳಬಹುದು.ಈ ಸಂದರ್ಭದಲ್ಲಿ ಕಲಾವಿದರಾದ ಚನ್ನಬಸಪ್ಪ ಹೊಳೆಪ್ಪನವರ, ಗವಿಸಿದ್ದಪ್ಪ ಕಟ್ಟಿಮನಿ, ರಾಜಶೇಖರ ದೊಡ್ಡಮನಿ, ಗವಿಸಿದ್ದಪ್ಪ ಗಿಣಿಗೇರಿ ಇತರರು ಉಪಸ್ಥಿತರಿದ್ದರು.
ಜ.16 ರಂದು ಸಂಪೂರ್ಣ ರಾಮಾಯಣ ಬಯಲಾಟ ಪ್ರದರ್ಶನ : ಎನ್.ಎಂ.ದೊಡ್ಡಮನಿ
Total Views 20
