ಯಲಬುರ್ಗಾ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದೊಡ್ಡಯ್ಯ ಗುರುವಿನ ಮತ್ತು ಉಪಾಧ್ಯಕ್ಷರಾಗಿ ರೇಣುಕಾ ಪಕ್ಕೀರಪ್ಪ ಉಪ್ಪಾರ ಅವಿರೋಧವಾಗಿ ಆಯ್ಕೆಯಾಗಿದ್ದು, ಆಡಳಿತ ಮಂಡಳಿ ಬಿಜೆಪಿ ವಶಕ್ಕೆ ಬಂದಿದೆ.
ಇತ್ತೀಚಿಗೆ ಸಂಘದ ಐದು ವರ್ಷದ ಅವಧಿಗೆ ನಡೆದ ನಿರ್ದೇಶಕರ ಚುನಾವಣೆ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ನಡೆಸಿ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ನಂತರ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸರ್ವ ಸದಸ್ಯರು ಮತ್ತು ಗ್ರಾಮದ ಮುಖಂಡರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ಮಾರುತಿ ಗಾವರಾಳ.ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಮುಖಂಡರಾದ ಅಮರೇಶ ಹುಬ್ಬಳ್ಳಿ.ವೀರಣ್ಣ ಹುಬ್ಬಳ್ಳಿ.ಶರಣಪ್ಪ ಇಳಗೇರ. ವಸಂತಕುಮಾರ ಭಾವಿಮನಿ. ಶಿವಕುಮಾರ ನಾಗಲಾಪೂರಮಠ. ಬಾಪೂಗೌಡ ಪಾಟೀಲ.ಬಸಲಿಂಗಪ್ಪ ಕೊತ್ತಲ. ಹನುಮಂತಪ್ಪ ರಾಥೋಡ್ . ಈರಪ್ಪ ಬಣಕಾರ ಮತ್ತಿತರು ಇದ್ದರು
