Monday, November 23, 2026
HomeKoppalಬಹದ್ದೂರ್ ಬಂಡಿ ನವಲಕಲ್ ಏತ ನೀರಾವರಿ ಯೋಜನೆಗೆ ಸಿಎಂ ಅವರಿಂದ ಲೋಕಾರ್ಪಣೆ: ರಾಘವೇಂದ್ರ ಹಿಟ್ನಾಳ

ಬಹದ್ದೂರ್ ಬಂಡಿ ನವಲಕಲ್ ಏತ ನೀರಾವರಿ ಯೋಜನೆಗೆ ಸಿಎಂ ಅವರಿಂದ ಲೋಕಾರ್ಪಣೆ: ರಾಘವೇಂದ್ರ ಹಿಟ್ನಾಳ

ಕನ್ನಡಮ್ಮ ಸುದ್ದ–ಕೊಪ್ಪಳ: ‘ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡಿದ್ದೇವೆ. ಬಹದ್ದೂರ್ ಬಂಡಿ ನವಲಕಲ್ ಹಾಗೂ ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳೀದರು.

ತಾಲ್ಲೂಕಿನ ಕುಣಿಕೇರಿ ತಾಂಡ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಹಾಗೂ ಅಲ್ಲಾನಗರ ಗ್ರಾಮಗಳಲ್ಲಿ ಅಂದಾಜು ₹12.30 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ, ಮಾತನಾಡಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ₹150 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಬಜೆಟ್ ನಂತರ ₹150 ಕೋಟಿ ಅನುದಾನ ತರುತ್ತೇನೆ’ ಎಂದರು. ಕುಣಿಕೇರಿ ಗ್ರಾಮಕ್ಕೆ ನೂತನವಾಗಿ ಮಂಜೂರಾದ ಪ್ರೌಢಶಾಲಾ ಕಟ್ಟಡವನ್ನು ಉದ್ಘಾಟಿಸಿದರು.

ಕಾಂಗ್ರೆಸ್‌ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಕೃಷ್ಣರೆಡ್ಡಿ ಗಲಬಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಬಾಲಚಂದ್ರನ್, ಮುಖಂಡರಾದ ಗೂಳಪ್ಪ ಹಲಗೇರಿ, ತೋಟಪ್ಪ ಕಾಮನೂರು, ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ಬಸಣ್ಣ ಬಂಗಾಳಿ, ಬನ್ನೆಪ್ಪ ಗೌಡ, ಜಗದೀಶ್ ಕರ್ಕಿಹಳ್ಳಿ, ಹನಮೇಶ್ ಹೊಸಳ್ಳಿ, ಪಂಪಣ್ಣ ಪೂಜಾರ, ಆನಂದ ಕಿನ್ನಾಳ, ಧರ್ಮರಾಜ ದೇವರಮನಿ, ರವಿ ದೇವರಮನಿ, ಕುಮಾರ್ ಮಜ್ಜಿಗಿ, ದೇವೇಂದ್ರಪ್ಪ ಮಜ್ಜಿಗಿ, ಕೊಪ್ಪಳ ತಹಶೀಲ್ದಾರ್‌ ವಿಠ್ಠಲ ಚೌಗುಲೆ, ತಾ.ಪಂ. ಇಒ ದುಂಡಪ್ಪ ತುರಾದಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ್ ಇತರರು ಇದ್ದರು. ₹188 ಕೋಟಿ ವೆಚ್ಚದ ಬಹದ್ದೂರ್ ಬಂಡಿ ನವಲಕಲ್ ಏತ ನೀರಾವರಿ ಯೋಜನೆಯ ಕಾರ್ಯವನ್ನು ಎರಡ್ಮೂರು ದಿನಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಮಾಡಲಾಗುವುದು. ಇದು ಯಶಸ್ವಿಯಾದರೆ ಸುಮಾರು 14000 ಎಕರೆ ಪ್ರದೇಶ ನೀರಾವರಿಯಾಗಲಿದೆ’ : ರಾಘವೇಂದ್ರ ಹಿಟ್ನಾಳ, ಶಾಸಕರು ಕೊಪ್ಪಳ ==

Total Views 16
RELATED ARTICLES

Most Popular

Recent Comments

KNN City News
Home
E-Paper