Monday, November 23, 2026
HomeBelagaviಮೆಟ್ರೋಕಾಸ್ಟ್ ಪ್ರೈವೆಟ್ ಇಂಡಿಯಾ ಲಿಮಿಟೆಡ್ ಸೇವೆ ಶ್ಲಾಘನೀಯ: ಹೆಬ್ಬಾಳ್ಕರ್

ಮೆಟ್ರೋಕಾಸ್ಟ್ ಪ್ರೈವೆಟ್ ಇಂಡಿಯಾ ಲಿಮಿಟೆಡ್ ಸೇವೆ ಶ್ಲಾಘನೀಯ: ಹೆಬ್ಬಾಳ್ಕರ್

ಬೆಳಗಾವಿ
ಬೆಳಗಾವಿಗರ ಸಾಧನೆಯನ್ನು ಮೆಚ್ಚಿ ಪರ ಜಿಲ್ಲೆ, ಪರ ರಾಜ್ಯದ ಜನರು ಬೆಳಗಾವಿಯ ಉದ್ಯಮಿ ನಾಗೇಶ್ ಛಾಬ್ರಿಯಾ ಅವರೊಂದಿಗೆ ಕೈ ಜೋಡಿಸುತ್ತಿರುವುದು ಬೆಳಗಾವಿಗರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬೆಳಗಾವಿಯ ಮೊದಲ ಕೇಬಲ್ ನೆಟವರ್ಕ್… ಬೆಳಗಾವಿಗರ ಪ್ರೀತಿ ವಿಶ್ವಾಸದೊಂದಿಗೆ ಉತ್ತುಂಗಕ್ಕೆ ಸಾಧನೆಯ ಶಿಖರವನ್ನೇ ಏರುತ್ತಿರುವ ರಿದ್ಧಿ ವಿಜ್ಹನ್ ಅರ್ಥಾತ್ ಮೆಟ್ರೋಕಾಸ್ಟ್ ಪ್ರೈವೆಟ್ ಇಂಡಿಯಾ ಲಿಮಿಟೆಡ್, ಜಿಟಿಪಿಎಲ್’ನ 30ನೇ ವರ್ಷದ ವಾರ್ಷಿಕೋತ್ಸವ ಅತ್ಯಂತ ಉತ್ಸಾಹದಲ್ಲಿ ನೆರವೇರಿತು.
ವಿಜ್ಹನ್ ಅರ್ಥಾತ್ ಮೆಟ್ರೋಕಾಸ್ಟ್ ಪ್ರೈವೆಟ್ ಇಂಡಿಯಾ ಲಿಮಿಟೆಡ್, ಜಿಟಿಪಿಎಲ್’ನ ಸಂಚಾಲಕರಾದ ನಾಗೇಶ್ ಛಾಬ್ರಿಯಾ ಹಾಗೂ ಎಂ.ಡಿ. ಅನಿರುದ್ಧಸಿಂಗ್ ಜಡೇಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೊಲ್ಹಾಪುರದ ಸಂಸದರಾದ ಧನಂಜಯ ಮಹಾಡಿಕ್ ಉಪಸ್ಥಿತರಿದ್ಧರು. ಗೌರವಾನ್ವಿತ ಅತಿಥಿಗಳಾಗಿ ಉತ್ತರ ಶಾಸಕರಾದ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಈ ವೇಳೆ ಆಧುನಿಕ ತಂತ್ರಜ್ಞಾನದೊಂದಿಗೆ ದಿವಂಗತ ನಿಶಾ ಛಾಬ್ರಿಯಾ ಅವರು ಜನರೊಂದಿಗೆ ನಡೆಸಿದ ಸಂವಾದ ನೆರೆದವರ ಮನ ಸೆಳೆಯಿತು.

ಕೊಲ್ಹಾಪುರದ ಸಂಸದ ಧನಂಜಯ ಮಹಾಡಿಕ್ ಅವರು ಮೊದಮೊದಲೂ ಈ ವ್ಯವಸಾಯದಲ್ಲಿ ಭಾಗಿಯಾಗಲೂ ಹಿಂದೇಟು ಹಾಕಿದಾಗ, ನಾಗೇಶ್ ಛಾಬ್ರಿಯಾ ಹಾಗೂ ಹರೀಶ್ ಗುಲಬಾನಿ ಅವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ನಂತರ ಇದು ಕೇವಲ ವ್ಯವಸಾಯವಲ್ಲದೇ, ನೆಟವರ್ಕ್ ತಯಾರಿಸುವ ಉತ್ತಮ ಮಾಧ್ಯಮವಾಗಿದೆ. ನಾಗೇಶ್ ಛಾಬ್ರಿಯಾ ಅವರು ಆರಂಭಿಸಿದ ಈ ವ್ಯವಸಾಯವೂ ದಿನದಿಂದ ದಿನಕ್ಕೆ ಉತ್ತುಂಗಕ್ಕೆರುತ್ತಿದೆ. ಭಾರತದ ಆರ್ಥಿಕತೆ ಜಗತ್ತಿನ 5ನೇ ಸ್ಥಾನದಲ್ಲಿದ್ದು, ಜಪಾನನೊಂದಿಗೆ ಪೈಪೋಟಿ ನಡೆಸಲು ಸಿದ್ಧವಾಗಿದೆ. 2027ರ ವರೆಗೆ 3ನೇ ಆರ್ಥಿಕ ಶಕ್ತಿಯಾಗಿ ಭಾರತವು ಹೊರಹೊಮ್ಮಲಿದೆ. ವಿಕಸಿತ ಭಾರತದಲ್ಲಿ ಪ್ರತ್ಯೇಕ ಭಾರತೀಯರು ಭಾಗವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಿದ್ಧಿ ವಿಜ್ಹನ್’ನ ಸಂಚಾಲಕಿ ನಿಶಾ ಛಾಬ್ರಿಯಾ ಅವರು ಕಂಡ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಅವರ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಯಾವುದೇ ಒಂದು ಸಂಸ್ಥೆಯನ್ನು ಆರಂಭಿಸಲು ದೊಡ್ಡ ಕನಸುಗಳನ್ನು ಕಾಣಲಾಗಿರುತ್ತದೆ. ಹಲವಾರು ಏಳುಬೀಳುಗಳನ್ನು ದಾಟಿ ಸಾಧನೆ ಮಾಡಿರುವುದನ್ನು ಕಂಡು ಸಾರ್ಥಕವೆನಿಸುತ್ತದೆ ಎಂದರು. ಕೇಬಲ್ ನೆಟವರ್ಕ್’ನಲ್ಲಿ ಕಿಂಗ್ ಆಗಿರುವ ಜಡೇಜಾ ಅವರೊಂದಿಗೆ ಕೈ ಜೋಡಿಸಿ ಬೆಳಗಾವಿಯ ಉದ್ಯಮಿ ಛಾಬ್ರಿಯಾ ಅವರು ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಮೈಸೂರು ಮತ್ತು ಹುಣಸೂರಿನ ಜನರ ಮನಸ್ಸು ಬೆಳಗಾವಿಗರು ಗೆದ್ದಿರುವುದು ಸಂತಸ ತರುವಂತಹದ್ದು.
ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಅವರು ಸಂಸ್ಥೆ ಅಥವಾ ವ್ಯವಹಾರಗಳನ್ನು ಕೇವಲ ಲಾಭಕ್ಕಾಗಿ ಮಾಡಲು ಬರುವುದಿಲ್ಲ. ಸಂಸ್ಥೆಗಳನ್ನು ಮುಂದುವರೆಸಲು ಲಾಭ ಮತ್ತು ನಷ್ಟವನ್ನು ಸಮಾನವಾಗಿ ಪರಿಗಣಿಸಬೇಕಾಗುತ್ತದೆ. ಕಷ್ಟ ಸುಖಗಳು ಜೀವನಕ್ಕೆ ಪಾಠವನ್ನು ಕಲಿಸಿ ಮುಂದೆ ಸಾಗಲೂ ದಾರಿ ತೋರಿಸುತ್ತವೆ. ರಿದ್ಧಿ ವಿಜ್ಹನ್’ನ್ನು ಪರಿವಾರ ಎಂದು ತಿಳಿದುಕೊಂಡು ಸೇವೆ ಸಲ್ಲಿಸುತ್ತಿರುವುದೇ ಸಂಸ್ಥೆಯ ಯಶಸ್ಸಿಗೆ ಕಾರಣ. ನಿಶಾ ಹಾಗೂ ನಾಗೇಶ್ ಛಾಬ್ರಿಯಾ ಅವರು ಎಲ್ಲರೊಂದಿಗೂ ಬೆರೆತು ಸಾಗುವ ವ್ಯಕ್ತಿತ್ವದವರು. ಸಂಸ್ಥೆಯನ್ನು ಬೆಳೆಸುವುದರ ಜೊತೆಗೆ ಹಲವರ ಜೀವನಕ್ಕೆ ಆಸರೆಯಾಗಿದ್ದಾರೆ. ಬೆಳಗಾವಿಯಲ್ಲಿ ಇವರು ಮಾಡಿದ ಸಾಧನೆಯನ್ನು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.

ಬೆಳಗಾವಿ ಉತ್ತರ ಶಾಸಕರಾದ ಆಸೀಫ್ ಸೇಠ್ ಅವರು ಛಾಬ್ರಿಯಾ ಕುಟುಂಬದೊಂದಿಗೆ ನಮ್ಮ ಒಡನಾಟ ಬಹಳ ಹಳೆಯದಾಗಿದೆ. ನಾಗೇಶ್ ಛಾಬ್ರಿಯಾ ಅವರು ಇಷ್ಟೊಂದು ಉನ್ನತಮಟ್ಟಕ್ಕೆ ಬೆಳೆಯಲು ಅವರ ಅರ್ಧಾಂಗಿಣಿ ನಿಶಾ ಛಾಬ್ರಿಯಾ ಅವರು ನೀಡಿದ ಸಹಯೋಗ ಅಮೌಲ್ಯವಾಗಿದೆ. ನಿಶಾ ಛಾಬ್ರಿಯಾ ಅವರ ವ್ಯಕ್ತಿತ್ವ ಅತ್ಯದ್ಭುತವಾಗಿತ್ತು. ಇಂದು ಅವರ ನಮ್ಮಲ್ಲಿ ಇಲ್ಲ. ಆದರೇ, ಅವರ ನೆನಪುಗಳು ಸದಾ ಜನರ ಮನದಲ್ಲಿ ಹಚ್ಚಹಸಿರಾಗಿವೆ.

ರಿದ್ಧಿ ವಿಜ್ಹನ್ ಮೆಟ್ರೋಕಾಸ್ಟ್ ಪ್ರೈವೆಟ್ ಇಂಡಿಯಾ ಲಿಮಿಟೆಡ್, ಜಿಟಿಪಿಎಲ್’ನ ಸಂಚಾಲಕರಾದ ನಾಗೇಶ್ ಛಾಬ್ರಿಯಾ ಅವರು ನಮ್ಮ ಕಂಪನಿಯಲ್ಲಿ 2500 ಕೇಬಲ್ ಆಪರೇಟರ್ಸಗಳಿದ್ದು, ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸುಮಾರು 10 ಲಕ್ಷ ಗ್ರಾಹಕರಿದ್ದಾರೆ. 30 ವರ್ಷದ ಈ ಪಯಣ ಸಿಹಿ-ಕಹಿಯ ಪಯಣವಾಗಿತ್ತು. ತಮ್ಮ ಪತ್ನಿಯಾದ ದಿವಂಗತ ನಿಶಾ ಛಾಬ್ರಿಯಾ ಕೂಡ ಹೆಗಲಿಗೆ ಹೆಗಲಾಗಿ ನಿಂತು ಸಂಸ್ಥೆಯನ್ನು ಮುಂದುವರೆಸಿದ್ದಾರೆ. ನಮ್ಮ ಕಂಪನಿಯೂ ಈಗ ಜಿಟಿಪಿಎಲ್’ನೊಂದಿಗೆ ಹೈ ಡೆಫಿನೇಷನ್, ವಿವಿಧ ಕಾಂಬೋ ಆಫರ್ಸ್, ಓಟಿಟಿ, ಐಪಿಟಿವಿಯೊಂದಿಗೆ ಮುಂದೆ ಸಾಗುತ್ತಿದೆ. ನಮ್ಮ ಕೇಬಲ್ ವಾಹಿನಿಯಲ್ಲಿ ಇನ್ ನ್ಯೂಸ್ ಸೇರಿದಂತೆ ಸ್ಥಳೀಯ ಸುದ್ಧಿವಾಹಿನಿಗಳ ಪ್ರಸಾರ, ಉತ್ಸವಗಳ ನೇರಪ್ರಸಾರ, ಪ್ರಾದೇಶಿಕ ಪ್ರಸಾರಗಳನ್ನು ಕಾಣಬಹುದು. ಗ್ರಾಹಕರಿಗೆ ನೀಡಲಾಗುತ್ತಿರುವ ವಿಶ್ವಾಸಾರ್ಹ ಸೇವೆಯೇ ನಮಗೆ ಬುನಾದಿ ಎಂದರು.
ನಂತರ ಮೆಟ್ರೋಕಾಸ್ಟ್ ಪ್ರೈವೆಟ್ ಇಂಡಿಯಾ ಲಿಮಿಟೆಡ್(ರಿದ್ಧಿ ವಿಜ್ಹನ್) ಜಿಟಿಪಿಎಲ್’’ಗಾಗಿ ಉತ್ತಮ ಸೇವೆ ಸಲ್ಲಿಸಿದವರನ್ನು ಗಣ್ಯರ ಹಸ್ತದಿಂದ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಆದಿತ್ಯ ಅಸ್ರಾನಿ, ರಿದ್ಧಿ ಅಸ್ರಾನಿ, ಸುಮುಖ ಛಾಬ್ರಿಯಾ, ಸಂಜನಾ ಛಾಬ್ರಿಯಾ, ಹರೀಶ್ ಗುಲಬಾನಿ, ಆದರ್ಶ ಗುಲಬಾನಿ, ರವಿ ಪಾಟೀಲ್, ಇನ್ ನ್ಯೂಸ್’ನ ಸಮೂಹ ಸಂಪಾದಕರಾದ ರಾಜಶೇಖರ್ ಪಾಟೀಲ್, ಸಂತೋಷ ಪರ್ವತರಾವ್, ಶಶಿಧರ ಕೋಟೆ, ಶ್ರೀಶ ಪಟ್ಟಣಶೆಟ್ಟಿ ಸೇರಿದಂತೆ ಇನ್ನುಳಿದ ಗಣ್ಯರು, ಕೇಬಲ್ ಆಪರೇಟರ್ಸ್, ಬ್ರಾಡಕಾಸ್ಟರ್ಸ್ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ಧರು.

Total Views 110
RELATED ARTICLES

Most Popular

Recent Comments

KNN City News
Home
E-Paper