Monday, November 23, 2026
HomeBelagaviಹಾಲಿ ಮೇಯರ್ ಗೆ ಸಂಕಷ್ಟ..! RC ಆದೇಶ ಅಂತಿಮ..!

ಹಾಲಿ ಮೇಯರ್ ಗೆ ಸಂಕಷ್ಟ..! RC ಆದೇಶ ಅಂತಿಮ..!

ಬೆಳಗಾವಿ
ಪಾಲಿಕೆ ಬಿಜೆಪಿ ಸದಸ್ಯ ಜಯಂತ ಜಾಧವ ಸೇರಿದಂತೆ ಇನ್ನೋರ್ವ ಬಿಜೆಪಿ ಸದಸ್ಯ ಬಸವೇಶ್ವರ ವೃತ್ತದಲ್ಲಿರುವ ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದರೂ ಸದಸ್ಯರಾದರೂ ಅಧಿಕಾರ ದುರುಪಯೋಗ ಪಡೆಸಿಕೊಂಡ ಹಿನ್ನೆಲೆಯಲ್ಲಿ ಇಬ್ಬರು ಬಿಜೆಪಿ ಪಾಲಿಕೆ ಸದಸ್ಯರನ್ನು ಅನರ್ಹ ಗೊಳಿಸಿರುವ ಪ್ರಾದೇಶಿಕ ಆಯುಕ್ತರ ತೀರ್ಪು ನಗರಾಭಿವೃದ್ಧಿ ಇಲಾಖೆ ಎತ್ತಿ ಹಿಡಿದಿದೆ.
ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ನೀಡಿದ ದೂರಿನ ಮೇರೆಗೆ ಪಾಲಿಕೆಯ ಬಿಜೆಪಿ ಸದಸ್ಯರಿಬ್ಬರು ತಮ್ಮ ಅಧಿಕಾರ‌ ದುರ್ಬಳಕೆ ಮಾಡಿಕೊಂಡು ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ತಿನಿಸು ಕಟ್ಟೆಯ ಮಳಿಗೆ ಪಡೆದು ಅಕ್ರಮ ಎಸೆಗಿದ್ದರು. ಈ ಕುರಿತಾಗಿ ಪ್ರಾದೇಶಿಕ ಆಯುಕ್ತರಿಗೆ ದೂರು‌ ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ, ಅವರ ವಿಚಾರಣೆ ನಡೆಸಿ ಬಿಜೆಪಿ ಪಾಲಿಕೆ ಸದಸ್ಯರಾದ ಮಂಗೇಶ ಪವಾರ್ ಹಾಗೂ ಜಯಂತ ಜಾಧವ್ ಅವರ ಸದಸ್ಯ ಅನರ್ಹಗೊಳಿಸಿದ್ದರು. ಈಗ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇಬ್ಬರೂ ಬಿಜೆಪಿ ಸದಸ್ಯರನ್ನು ಅನರ್ಹಗೊಳಿಸಿರುವ ತೀರ್ಪು ಎತ್ತಿ ಹಿಡಿದಿದ್ದಾರೆ‌.

Total Views 155
RELATED ARTICLES

Most Popular

Recent Comments

KNN City News
Home
E-Paper