ಶಿವಶರಣಪ್ಪ ಗೌಡ್ರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ . ನವಲಿ ಹಿರೇಮಠ.

ಕನ್ನಡಮ್ಮ ಸುದ್ದಿ ಕುಕನೂರ: ಶನಿವಾರ ಕುಕನೂರಿನ ಪ್ರವಾಸ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನವಲಿ ಹಿರೇಮಠ ಅವರು , ಮಾಜಿ ಶಾಸಕರಾದ ಶಿವಶರಣ ಗೌಡ ಪಾಟೀಲರು ನನ್ನ ಮತ್ತು ಈ ತಾಲೂಕಿನ ಶಾಸಕರಾದ ಬಸವರಾಜ್ ರಾಯರೆಡ್ಡಿ ಅವರ ಕುಟುಂಬದ ಸೋದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅವರ ಆರೋಪ ಸತ್ಯಕ್ಕೆ ದೂರವಾದದ್ದು.
ನಾನು ಕಾನೂನು ಬದ್ಧವಾಗಿ ನನ್ನ ವ್ಯವಹಾರ ಮಾಡುತ್ತೇನೆ , ನಾನು ಸರ್ಕಾರಕ್ಕೆ ಕೋಟ್ಯಾನ್ ಗಟ್ಲೆ ಹಣವನ್ನು ಟ್ಯಾಕ್ಸ್ ಕಟ್ಟುತ್ತೇನೆ.
ನಾನಾಗಲೇ ಬಸವರಾಜ ರಾಯರೆಡ್ಡಿ ಅವರಾಗಲಿ ಯಾವುದೇ ಪಾರ್ಟ್ನರ್ಶಿಪ್ ವ್ಯವಹಾರ ಮಾಡುತ್ತಿಲ್ಲ ಹಾಗೂ ಅವರು ಸೋದರರು ತಾಲೂಕಿನ ಯಾವುದೇ ಆಫೀಸಿಗೆ ಹೋಗುವುದಿಲ್ಲ, ಅವರು ತಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡು ಇದ್ದಾರೆ, ಬಸವರಾಜ್ ರಾಯರೆಡ್ಡಿ ಅವರ ಕುಟುಂಬದ ಬಗ್ಗೆ ಮಾಡುವ ಆರೋಪ ನಾನು ಮತ್ತು ಈ ತಾಲೂಕಿನ ಜನತೆ ಒಪ್ಪುವುದಿಲ್ಲ.
ಬಸವರಾಜ್ ರಾಯರೆಡ್ಡಿ ಅವರು ಸದಾ ಅಭಿವೃದ್ಧಿ ಪರವಾಗಿ ಇರುವವರು.
ನಾನು ಯಲಬುರ್ಗಾ ತಾಲೂಕಿನಲ್ಲಿ ವಿಂಡ್ ಪವರ್ ಕಂಪನಿಗಳಿಗೆ ಕ್ರಷರ್ ಜಲ್ಲಿ ಕಲ್ಲುಗಳನ್ನು ಪೂರೈಸುತ್ತೇವೆ, ಜಲ್ಲಿ ಕಲ್ಲುಗಳನ್ನು ನ್ಯಾಯ ಬದ್ಧವಾದ ಬೆಲೆಯಲ್ಲಿ ಪೂರೈಸುತ್ತೇವೆ, ಆದರೆ ಇದಕ್ಕೆ ಶಿವಶರಣಪ್ಪ ಗೌಡ್ರ ಮಗ ಅರವಿಂದ್ ಗೌಡ ಪಾಟೀಲರು ವಿರೋಧಪಡಿಸಿ ನಮ್ಮ ಲಾರಿಗಳನ್ನು ತಡೆಗಟ್ಟಿ ನನ್ನ ಕಾನೂನು ಬದ್ಧ ವ್ಯವಹಾರಕ್ಕೆ ಅಡೆತಡೆ ಉಂಟು ಮಾಡಿ, ನನ್ನ ಮೇಲೆ ಹುರುಳಿಲ್ಲದ ಆರೋಪ ಮಾಡಿ ನವಲಿ ಹಿರೇಮಠ ಮತ್ತು ಬಸವರಾಜ್ ರಾಯರೆಡ್ಡಿ ಅವರು ದೌರ್ಜನ್ಯ ಮಾಡುತ್ತಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ ಇದರ ಅವಶ್ಯಕತೆ ನನಗಾಗಲಿ ಮತ್ತು ಬಸವರಾಜ್ ರಾಯರೆಡ್ಡಿ ಅವರಿಗೆ ಇಲ್ಲ ಅರವಿಂದ್ ಗೌಡ್ರು ಸುಖ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ.
