ಚಲವಾದಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.ರಾಮಣ್ಣ ಬಂಕದಮನಿ 
ಕನ್ನಡಮ್ಮ ಸುದ್ದಿ :ಕುಕನೂರು.ಕೊಪ್ಪಳ ಜಿಲ್ಲಾ ಚಲವಾದಿ ಜಾಗೃತಿ ವೇದಿಕೆ ಹಾಗೂ ಚಲವಾದಿ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘದಿಂದ ನಗರದ ಮೇಘರಾಜ್ ಕಲ್ಯಾಣ ಮಂಟಪ ದಲ್ಲಿ ಕಾರ್ಯಕ್ರಮ
ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ 2023,24ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರತಿಶತ ಶೇಕಡ 60 ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನ.26 ರಂದು ಜಿಲ್ಲಾ ಚಲವಾದಿ ಜಾಗೃತಿ ವೇದಿಕೆ ಹಾಗೂ ಛಲವಾದಿ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘದಿಂದ ನಗರದ ಮೇಘರಾಜ್ ಕಲ್ಯಾಣ ಮಂಟಪ ದಲ್ಲಿ ಜರುಗಲಿದೆ ಎಂದು ಕುಕನೂರು ಪಟ್ಟಣದ ಚಲವಾದಿ ಸಮಾಜದ ಮುಖಂಡ ರಾಮಣ್ಣ ಬಂಕದಮನಿಹೇಳಿದರು.
ಪಟ್ಟಣದ ಚಲವಾದಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸಭೆ ಕರೆಯಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು. ಈ ಒಂದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗೋಣ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ಮುಂದಿನ ದಿನಮಾನಗಳಲ್ಲಿ ಕುಕನೂರು ತಾಲೂಕು ಚಲವಾದಿ ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಚಲವಾದಿ ಸಮಾಜದ ಹಿರಿಯರು ಮತ್ತು ಯುವಕರು ಇದ್ದರು.
