ಉಪ ಚುನಾವಣೆಯ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರದ ಅಭ್ಯರ್ಥಿಗಳ ಗೆಲವು. ಕುಕನೂರ್ ಬ್ಲಾಕ್ ಕಾಂಗ್ರೆಸ್ ಘಟಕ ವಿಜಯೋತ್ಸವ.

ಕನ್ನಡಮ್ಮ ಸುದ್ದಿ ಕುಕನೂರ
ಕರ್ನಾಟಕ ರಾಜ್ಯದಲ್ಲಿ ನಡೆದ ಉಪಚುನಾವಣೆ- ಕಾಂಗ್ರೆಸ್ ಪಕ್ಷದ ಮೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮತಗಳನ್ನು ನೀಡಿ ಗೆಲ್ಲಿಸಿದ , ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆ ಕ್ಷೇತ್ರದ ಮತದಾರರಿಗೆ ಕುಕನೂರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಘಟಕ ಕುಕನೂರಿನ ವೀರಭದ್ರೇಶ್ವರ ಸರ್ಕಲ್ ನಲ್ಲಿ ಕಾಂಗ್ರೆಸ್ ಮುಖಂಡರಿಂದ ಪಟಾಕ್ಷಿ ಸಿಡಿಸುವ, ಸಿಹಿ ಹಂಚುವ ಮೂಲಕ ಸಂಭ್ರಮ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದಯ್ಯ ಕಳ್ಳಿಮಠ, ಬ್ಲಾಕ್ ಕಾಂಗ್ರೆಸ್ ವಕ್ತರಾದ ಸಂಗಮೇಶ್ ಗುತ್ತಿ, ಮಹೇಶ್ ಮುಧೋಳ್, ಮಂಜುನಾಥ್ ಯಡಿಯೂಪುರ್, ರಾಘವೇಂದ್ರ ಕಾತರಕಿ, ಯಲ್ಲಪ್ಪ ಕಲ್ಮನಿ, ದೇವಪ್ಪ, ರಹಿಮಾನ್ಸಾಬ್ ಮಕ್ಕಪ್ಪನವರ್, ನೂರುದ್ದೀನ್, ಕಾಂಗ್ರೆಸ್ ಪಟ್ಟಣ ಪಂಚಾಯತಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಇತರರು ಇದ್ದರು.

