Monday, November 23, 2026
HomeKoppalಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಜನವರಿ 6 ರಂದು ಸಂವಿಧಾನ ಸಂರಕ್ಷಣಾ ಸಮಿತಿಯಿಂದ...

ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಜನವರಿ 6 ರಂದು ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಕೊಪ್ಪಳ ಬಂದ್

ಕನ್ನಡಮ್ಮ ಸುದ್ದಿ-ಕೊಪ್ಪಳ: ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಜನವರಿ 6ರಂದು ಸಂವಿಧಾನ ಸಂರಕ್ಷಣಾ ಸಮಿತಿಯು  ಕೊಪ್ಪಳ ಬಂದ್ ಗೆ ಕರೆ ‌ನೀಡಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡರಾದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹನುಮೇಶ ಕಡೆಮನಿ, ಟಿ. ರತ್ನಾಕರ, ಇತರರು, ಕೊಪ್ಪಳ ಬಂದ್ ಗೆ ಅಹಿಂದ, ಅಲ್ಪ ಸಂಖ್ಯಾತರ ಸಂಘಟನೆಗಳು ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ. ಅಂದು ವಾಹನಗಳ ಸಂಚಾರ ಹಾಗೂ ವ್ಯಾಪಾರ ವಹಿವಾಟು ಬಂದ್ ಆಗಲಿದೆ , ನಗರದ ತಾಲೂಕ ಕ್ರೀಡಾಂಗಣದಿಂದ ಅಂಬೇಡ್ಕರ್ ಸರ್ಕಲ್, ಗಡಿಯಾರ ಕಂಬದ ಮೂಲಕ ಅಶೋಕ ಸರ್ಕಲ ವರೆಗೆ  ಪ್ರತಿಭಟನಾ ಮೆರವಣಿಗೆ ನಡೆಯಲಿದೆ, ಬಂದ್ ಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಸಂಸತ್ತಿನ ಅಧಿವೇಶನದಲ್ಲಿ ನಡೆದ ಚರ್ಚೆ ವೇಳೆ ಅಮಿತ್ ಶಾ ಅವಮಾನ ಮಾಡಿದ್ದಾರೆ. ಅವರನ್ನು ಸಂಪುಟದಿಂದ ವಜಾ ಮಾಡಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿದ್ದ ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಮುಖಂಡರಾದ ಸುಕ್ರರಾಜ್ ತಾಳಕೇರಿ, ಯಲ್ಲಪ್ಪ ಬಳಗಾನೂರು, ಕಾಶಪ್ಪ ಚಲವಾದಿ, ಸಿದ್ದರಾಮ ಹೊಸಮನಿ, ರಾಮಣ್ಣ ಚೌಡ್ಕಿ, ಸಲೀಂ ಖಾದ್ರಿ, ನಿಂಗಜ್ಜ ಚೌದ್ರಿ ಶಾಹಪುರು, ಕೆ.ಎಸ್. ಮೈಲಾರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಈಶಪ್ಪ ಶಿರೂರು ಹಾಗೂ ಕೆ.ಎಸ್. ಮೈಲಾರಪ್ಪ  ಆಗ್ರಹಿಸಿದರು.

Total Views 61
RELATED ARTICLES

Most Popular

Recent Comments

KNN City News
Home
E-Paper