Monday, November 23, 2026
HomeKoppalಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ದರೆ ಡಿ.31ರಂದು ಸಾರಿಗೆ ಬಂದ್

ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ದರೆ ಡಿ.31ರಂದು ಸಾರಿಗೆ ಬಂದ್

* 5,010 ಕೋಟಿ ರೂ. ಬಾಕಿ ಹಣಕ್ಕಾಗಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌  ಆಗ್ರಹ

ಕನ್ನಡಮ್ಮ ಸುದ್ದಿ-ಕೊಪ್ಪಳ: ಸಾರಿಗೆ ನೌಕರರು ಸರ್ಕಾರಕ್ಕೆ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವಾದರೆ ಡಿ.31ರಿಂದ ರಾಜ್ಯದಾದ್ಯಂತ ಬಸ್‌ ಸಂಚಾರ ಬಂದ್‌ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ ಮುಖಂಡರು ತಿಳಿಸಿದ್ದಾರೆ.

ಫೆಡರೇಷನ್‌ ಗೌರವಾಧ್ಯಕ್ಷ ಯು.ಎಸ್‌. ಸೊಪ್ಪಿಮಠ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಎ.ಬಿ.ದಿಂಡೂರು ಇತರರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಸ್‌ ಸಂಚಾರ ಸ್ಥಗಿತಗೊಳಿಸಿ ಹೋರಾಟ ಮಾಡುವುದಾಗಿ ಈಗಾಗಲೇ ಸರ್ಕಾರಕ್ಕೆ ತಿಳಿಸಲಾಗಿದೆ ಎಂದರು.

ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಿಬ್ಬಂದಿಗಳ ನೇಮಕಾತಿಯನ್ನು ಬೇಗ ಮುಗಿಸಿ, ಎಲ್ಲಾ ನಿಗಮಗಳಲ್ಲೂ ನೌಕರರ ಮುಂಬಡ್ತಿಗೆ ಕ್ರಮ ತೆಗೆದುಕೊಳ್ಳಬೇಕು, ಶಕ್ತಿ ಯೋಜನೆಯಿಂದ ಚಾಲಕ/ನಿರ್ವಾಹಕರಿಗೆ ಆಗುತ್ತಿರುವ ಶಿಕ್ಷೆ ಮತ್ತು ಕಿರುಕುಳಗಳ ಬಗ್ಗೆ ಅಲಾಹಿತ ಟಿಪ್ಪಣಿ ಕೊಡುತ್ತಿದ್ದೇವೆ ಅಲ್ಲದೆ ಆಡಳಿತ ವರ್ಗಕ್ಕೆ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿ ಜೊತೆ ಚರ್ಚಿಸಿ ಪರಿಹರಿಸಬೇಕು ಎಂದು ಆಗ್ರಹ ಪಡಿಸಿದರು. ಈ ಸಂದರ್ಭದಲ್ಲಿ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಹನುಮಂತಪ್ಪ ಅಂಬಿಗಾರ, ಮಕುಬುಲ್‌ ರಾಯಚೂರು, ಅಬ್ದುಲ್‌ ಗಫಾರ್‌ ಇದ್ದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಶಕ್ತಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಅದರ ಸಂಪೂರ್ಣ ಅನುದಾನವನ್ನು ಸರ್ಕಾರ ನಾಲ್ಕೂ ನಿಗಮಗಳಿಗೆ ಪಾವತಿಸಬೇಕು. ಬಸ್‌ ಬಿಡಿಭಾಗ ತುಂಡಾದರೆ ಅದನ್ನು ಬದಲಿಸುವ ಬದಲು ವೆಲ್ಡಿಂಗ್‌ ಮಾಡಿಕೊಂಡು ತೆಗೆದುಕೊಂಡು ಹೋಗಬೇಕಾಗಿದೆ. ಆಗ ಅವಘಡ ಸಂಭವಿಸಿದರೆ ಸಾರಿಗೆ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಇದು ನ್ಯಾಯವೇ’ ಎಂದು ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಅಬ್ದುಲ್‌ ಗಫಾರ್‌ಪ್ರಶ್ನಿಸಿದರು.

‘ಸಾರಿಗೆ ಸಿಬ್ಬಂದಿಯ ತುಟ್ಟಿಭತ್ಯೆ ರಜೆ ನಗದೀಕರಣ ₹325 ಕೋಟಿ, ಭವಿಷ್ಯ ನಿಧಿ ಬಾಕಿ ₹2,900 ಕೋಟಿ, 38 ತಿಂಗಳ ವೇತನ ಹೆಚ್ಚಳದ ಬಾಕಿ ₹1,785 ಕೋಟಿ ಹೀಗೆ ಒಟ್ಟು ₹5,010 ಕೋಟಿ,  ಸೇರಿ ನೌಕರರ ವಿವಿಧ ಭತ್ಯೆಗಳನ್ನು ಹೆಚ್ಚಿಸ ಬೇಕು, ವೈದ್ಯಕೀಯ ಸೌಲಭ್ಯ ನೀಡಬೇಕು, ಪ್ರತಿಯೊಬ್ಬ ನೌಕರನಿಗೂ ಹೊರ ರೋಗ ಚಿಕಿತ್ಸೆ ವೆಚ್ಚಕ್ಕಾಗಿ ₹2,000 ನೀಡಬೇಕು’ : ಎ.ಬಿ.ದಿಂಡೂರು, ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕ
Total Views 48
RELATED ARTICLES

Most Popular

Recent Comments

KNN City News
Home
E-Paper