Monday, November 23, 2026
HomeKoppalಕೊಪ್ಪಳದಲ್ಲಿ ನಾಳೆ ಜ. 5 ಭಾನುವಾರ ದಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಕೊಪ್ಪಳದಲ್ಲಿ ನಾಳೆ ಜ. 5 ಭಾನುವಾರ ದಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಕನ್ನಡಮ್ಮ ಸುದ್ದಿ-ಕೊಪ್ಪಳ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆವಿ ಎಂ.ಎಂ.ಯು.ಎಸ್ ಕೊಪ್ಪಳ ಸ್ಟೇಷನ್ ತುರ್ತು ನಿರ್ವಹಣೆ ಕೆಲಸ ನಡೆಸುತ್ತಿರುವ ಪ್ರಯುಕ್ತ ಈ ಸ್ಟೇಷನಗೆ ಒಳಪಡುವ ಎಲ್ಲ ಮಾರ್ಗಗಳಲ್ಲಿ ಜನವರಿ 5 ರಂದು ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 02 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕೊಪ್ಪಳ ಸ್ಟೇಷನ್‌ಗೆ ಒಳಪಡುವ ಎಫ್-1 ಕಾಮನೂರ, ಎಫ್-3 ಎಸ್.ಜಿ ಕಾಲೇಜ್, ಎಫ್-5 ಬಗನಾಳ, ಎಫ್-6 ಬಸಾಪೂರ, ಎಫ್-8 ಭಾಗ್ಯನಗರ, ಎಫ್-9 ಬನ್ನಿಕಟ್ಟಿ, ಎಫ್-11 ಡಿಸಿ ಆಫೀಸ್, ಎಫ್-12 ತಾಲೂಕ ಪಂಚಾಯತ್, ಎಫ್-13 ಕಾಳಿದಾಸನಗರ. ಈ ಎಲ್ಲಾ ಫೀಡರ್‌ಗಳ 11 ಕೆವಿ ಲೈನ್‌ಗಳು ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views 28
RELATED ARTICLES

Most Popular

Recent Comments

KNN City News
Home
E-Paper