Monday, November 23, 2026
HomeHeadlinesಗವಿಶ್ರೀ ಜಾತ್ರೆ : ಸುಪ್ರಸಿದ್ಧ ಹಿಂದುಸ್ತಾನಿ ಗಾಯಕ ಪಂಡಿತ್ ಪದ್ಮಶ್ರೀ ಶ್ರೀ ಎಂ ವೆಂಕಟೇಶ್‌ಕುಮಾರ್‌ ಅವರಿಂದ...

ಗವಿಶ್ರೀ ಜಾತ್ರೆ : ಸುಪ್ರಸಿದ್ಧ ಹಿಂದುಸ್ತಾನಿ ಗಾಯಕ ಪಂಡಿತ್ ಪದ್ಮಶ್ರೀ ಶ್ರೀ ಎಂ ವೆಂಕಟೇಶ್‌ಕುಮಾರ್‌ ಅವರಿಂದ ಉದ್ಘಾಟನೆ

*15 ಜನವರಿ 2025 ರಂದು ಮಹಾರಥೋತ್ಸವ || ಜ.16, 17 ರಂದು ಕೈಲಾಸ ಮಂಟಪದಲ್ಲಿ ಭಕ್ತ ಹಿತಚಿಂತನ ಕಾರ್ಯಕ್ರಮ

*ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯ|| ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್‌ ||

ಹೊಸಶಕೆ ನ್ಯೂಸ್-ಕೊಪ್ಪಳ- ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಬವಾಗಿದ್ದು , 15. ಜನವರಿ 2025 ರಂದುಜರುಗುವ ಜಾತ್ರೆಯ ಮಹಾರಥೋತ್ಸವವಕ್ಕೆ ಧಾರವಾಡದ ಸುಪ್ರಸಿದ್ಧ ಹಿಂದುಸ್ತಾನಿ ಗಾಯಕರಾದ ಪಂಡಿತ್ ಪದ್ಮಶ್ರೀ ಶ್ರೀ ಎಂ ವೆಂಕಟೇಶ್‌ಕುಮಾರ್‌ ಅವರು ಚಾಲನೆ ನೀಡಲಿದ್ದಾರೆ. ಉದ್ಘಾಟನೆ ಸಮಾರಂಭದ ಸಾನಿಧ್ಯವನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ವಿಜಯಪುರದ ಹುಬ್ಬಳ್ಳಿ ಶ್ರೀ ಷಣ್ಮುಖಾರೂಢಮಠದ ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು ಹಾಗೂ ಚಿಂತಕರು ಮತ್ತು ಸಾಹಿತಿಗಳಾದ ಡಾ. ನಾಗತಿಹಳ್ಳಿ ಚಂದ್ರಶೇಖರ್‌ ಆಗಮಿಸಲಿದ್ದಾರೆ.

ಕೈಲಾಸ ಮಂಟಪದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಧಾರವಾಡದ ಶ್ರೀ ಬಸವರಾಜ ವಂದಲಿ ಹಾಗೂ ಹುಬ್ಬಳ್ಳಿಯ ಶ್ರೀ ಸುಜಯಿಂದ್ರಕುಲಕರ್ಣಿ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಮತ್ತು ಮೈಸೂರಿನ ಸರಿಗಮಪ ಖ್ಯಾತಿಯ ಗಾಯಕರಾದ ಶ್ರೀ ಹರ್ಷಎಂ.ಆರ್ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಕೈಲಾಸ ಮಂಟಪದಲ್ಲಿ ನಡೆಯುವ ಭಕ್ತ ಹಿತಚಿಂತನ ಕಾರ್ಯಕ್ರಮಗಳು : ಜ.16 ,ಗುರುವಾರ,ಸಾಯಂಕಾಲ 6:00ಗೆ ಕೈಲಾಸ ಮಂಟಪದಲ್ಲಿ ನಡೆಯುವ ಭಕ್ತ ಹಿತಚಿಂತನ ಸಭೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಪರಮಪೂಜ್ಯ ಶ್ರೀ ಗುರು ಬಸವ ಪಟ್ಟದೇವರು ಹಾಗೂ ಒಳ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಶ್ರೀಮ.ನಿ.ಪ್ರ.ಬಸವಲಿಂಗ ಮಹಾಸ್ವಾಮಿಗಳು ಹಾಗೂ ಮಂಗಳೂರಿನ ಅರಳಲೇ ಹಿರೇಮಠ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ದಾವಣಗೆರೆಯ ಶ್ರೀ ಜಡೆಸಿದ್ದ ಶಿವಯೋಗಿಶ್ವರ ಮಠದ ಶ್ರೀ ಶೋ ಬ್ರ.ಶಿವಾನಂದ ಮಹಾಸ್ವಾಮಿಗಳಿಂದ ಉಪದೇಶಾಅಮೃತವನ್ನು ನೀಡುವರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಸ್ಸಾಂರಾಜ್ಯದಜೋಹೃಟ್ ಪ್ರದೇಶದ ಫಾರೆಸ್ಟ್ ಮ್ಯಾನ್‌ಆಫ್‌ಇಂಡಿಯಾಎAದು ಪ್ರಖ್ಯಾತಿಯನ್ನು ಪಡೆದ ಪದ್ಮಶ್ರೀ ಜಾದವ್ ಪಾಯಂಗ್‌ರವರು ಭಾಗವಹಿಸುವರು.

ನಂತರ ನಡೆಯುವ ಸಂಗೀತಕಾರ್ಯಕ್ರಮದಲ್ಲಿ ಪಂಡಿತ್‌ ಡಾ. ಮೈಸೂರು ಮಂಜುನಾಥ್‌ ಇವರಿಂದ ವಾಯೋಲಿನ್, ಮುಂಬೈನ ಪಂಡಿತ್‌ ರೂಪಕುಲಕರ್ಣಿವರಿಂದ ಬಾನ್ಸೂರಿ, ಧಾರವಾಡದ ಪಂಡಿತ್‌ ಕೈವಲ್ಯ ಕುಮಾರ್‌ ಗುರವ್‌ಇವರಿಂದ ಗಾಯನ, ಬೆಂಗಳೂರಿನ ಪಂಡಿತ್‌ ಗಿರಿಧರ ಉಡುಪ ಇವರಿಂದ ಘಿಟಾರ್ ಮುಂಬೈನ ಪಂಡಿತ್ ಮುಕುಂದರಾಜ್‌ದೇವುಇ ವರಿಂದ ತಬಲ  ಕಾರ್ಯಕ್ರಮ ಜರುಗಲಿದೆ.

ಜ. 17 ಶುಕ್ರವಾರ, ಸಾಯಂಕಾಲ 6:00ಗೆ ಸಮಾರೋಪ ಸಮಾರಂಭ :  ಕಾರ್ಯಕ್ರಮದ ಸಾನಿಧ್ಯವನ್ನು ಹೆಬ್ಬಾಳದ ಬೃಹನ್ಮಠದ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಶಿರೂರು ಮಹಾಂತ ತೀರ್ಥಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಪೂಜ್ಯ ಶ್ರೀ ಡಾಕ್ಟರ ಬಸವಲಿಂಗ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ಬೆಂಗಳೂರಿನ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ವಿ.ಶ್ರೀಶಾನಂದ್‌ರವರು ಸಮಾರೋಪ ನುಡಿಯನ್ನು ನುಡಿಯಲಿದ್ದಾರೆ.  ನಂತರ ಜೀ ಕನ್ನಡಖ್ಯಾತಿಯ ಶುಭರಾಘವೇಂದ್ರ ಮೈಸೂರು ಹಾಗೂ ತಂಡದವರಿಂದ ಮತ್ತು ಸಹಗಾಯನ ಕಾರ್ಯಕ್ರಮ ವೆ.ಚಿ.ಅರುಣ್‌ಕುಮಾರ್ ಬೆಂಗಳೂರು ಇವರಿಂದ ಮತ್ತು ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಬೆಂಗಳೂರಿನ ಸೂರ್ಯಕಾಂತ್ ಗಡಿನಿಂಗದಹಳ್ಳಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮಜ ರುಗಲಿದೆ ನಂತರದಲ್ಲಿ ಗಂಗಾವತಿಯ ಬಿ.ಪ್ರಾಣೇಶ್‌ ಇವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Total Views 49
RELATED ARTICLES

Most Popular

Recent Comments

KNN City News
Home
E-Paper