Monday, November 23, 2026
HomeKoppalಬಸ್‌ ದರ ಏರಿಕೆ ಖಂಡಿಸಿ ಕೊಪ್ಪಳದಲ್ಲಿ ಸಿಪಿಐಎಂ ನಿಂದ ಪ್ರತಿಭಟನೆ

ಬಸ್‌ ದರ ಏರಿಕೆ ಖಂಡಿಸಿ ಕೊಪ್ಪಳದಲ್ಲಿ ಸಿಪಿಐಎಂ ನಿಂದ ಪ್ರತಿಭಟನೆ

ಹೊಸಶಕೆ ನ್ಯೂಸ್-ಕೊಪ್ಪಳ: ರಾಜ್ಯ ಸರ್ಕಾರ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಪ್ರಯಾಣಿಕರ ಸಾರಿಗೆ ದರ ಶೇ. 15ರಷ್ಟು ಏರಿಕೆ ಮಾಡಿರುವದನ್ನು ಖಂಡಿಸಿ  ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದ) ತಾಲ್ಲೂಕು ಸಮಿತಿ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಬಸ್ ದರ ಏರಿಕೆಯು  ಜನರ ಮೇಲೆ ಬರೆ ಎಳೆದಂತೆ ಆಗಿದೆ. ಡಿಸೇಲ್‌ ದರ ಏರಿಕೆ ಹಾಗೂ ಸಾರಿಗೆ ಸಿಬ್ಬಂದಿ ವೆಚ್ಚ ಹೆಚ್ಚಳದ ನೆಪದಲ್ಲಿ ಟಿಕೆಟ್‌ ದರವನ್ನೂ ಏರಿಕೆ ಮಾಡಿದ್ದು ಸರಿಯಲ್ಲ. ಇಂಧನ ಬೆಲೆ ಹೆಚ್ಚಾಗಿದೆ ಎಂದು ಹೇಳುವ ಸರ್ಕಾರ ಇಂಧನ ಬೆಲೆ ಇಳಿಕೆಯಾದರೆ ಪ್ರಯಾಣದ ದರವನ್ನೂ ಇಳಿಕೆ ಮಾಡಿದೆಯೇ? ಎಂದು ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಸುಂಕಪ್ಪ ಗದಗ  ಪ್ರಶ್ನಿಸಿದರು. ಸಾರ್ವಜನಿಕರ ಬದುಕಿನ ಮೇಲೆ ಬರೆ ಎಳೆಯುವುದು ಸರಿಯಲ್ಲ. ಎಲೆಕ್ಟ್ರಿಕ್‌ ಬಸ್‌ಗಳನ್ನು ನಿಗಮಗಳೇ ಕಾರ್ಯಾಚರಣೆ ನಡೆಸಿದರೆ ಸಾಕಷ್ಟು ಆದಾಯ ಹೆಚ್ಚುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಬದುಕು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ತನ್ನ ನಿರ್ಧಾರವನ್ನು ವಾಪಸ್‌ ಪಡೆಯಬೇಕು ಎಂದು ಅಗ್ರಹಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಗೌಸುಸಾಬ್ ನದಾಫ್, ಹುಲುಗಪ್ಪ ಗೋಕಾವಿ, ಹುಸೇನ್ ಸಾಬ್ ನದಾಫ್, ಫಕೀರಮ್ಮ ಮಿರಗನತಂಡಿ, ಶಾಂತವ್ವ ಬೆಂಗಳೂರಮನಿ ಇತರರು ಪಾಲ್ಗೊಂಡಿದ್ದರು.

Total Views 16
RELATED ARTICLES

Most Popular

Recent Comments

KNN City News
Home
E-Paper