Monday, November 23, 2026
HomeBelagaviಜ.22 ರಂದು ತೃತಿಯ ಶ್ರೀ ರಾಮೋತ್ಸವದ ಕಾರ್ಯಕ್ರಮ

ಜ.22 ರಂದು ತೃತಿಯ ಶ್ರೀ ರಾಮೋತ್ಸವದ ಕಾರ್ಯಕ್ರಮ

ಚ.ಕಿತ್ತೂರು : ಅಯೋಧ್ಯೆಯ ಬಾಲರಾಮನ ಪ್ರಾಣಪ್ರತಿಷ್ಠಾಪನೆ ತೃತಿಯ ವಾರ್ಷಿಕೋತ್ಸವದ ಅಂಗವಾಗಿ ದೀಪೋತ್ಸವ ಹಾಗೂ ಶೋಭಾಯಾತ್ರೆ ನಡೆಯಲಿದೆ.
ಜ.22 ಗುರುವಾರ ರಂದು ಸಂಜೆ 5 ಕ್ಕೆ ನಿಚ್ಚಣಕಿ ಗ್ರಾಮದ ಶ್ರೀ ಗುರುಮಡಿವಾಳೇಶ್ವರ ಮಠದಿಂದ ಭವ್ಯ ಶೋಭಾಯಾತ್ರೆ ಹೊರಟು ಕಿತ್ತೂರಿನ ಸೋಮವಾರ ಪೇಟೆ, ಗುರುವಾರ ಪೇಟೆಯಲ್ಲಿ ಬೀದಿಗಳಲ್ಲಿ ಸಂಚರಿಸಿ ರಾತ್ರಿ 9ಗಂಟೆ ಸುಮಾರಿಗೆ ಗುದ್ದಿ ಓಣಿಯ ಶ್ರೀ ರುಕ್ಮಿಣಿ‌ ಪಾಂಡುರಂಗ ದೇವಸ್ಥಾನದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಕಾರಣ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಶೋಭೆ ತರಬೇಕೆಂದು ಶ್ರೀ ಆನಂದತೀರ್ಥ ಮಠದ, ಶ್ರೀ ದುಂಡಪ್ಪ ಇನಾಮದಾರ, ಶ್ರೀ ರಾಜು ವಸ್ತ್ರದ, ಮಂಜುನಾಥ ದೊಡ್ಡಣ್ಣವರ, ಕಿರಣ್ ಪಾಟೀಲ್ , ಕಾರ್ತಿಕ ಬಡಿಗೇರ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಪ್ರಮುಖರು ಈ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಆನಂದತೀರ್ಥ ಮಠದ
8867098139, 9481471620 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Total Views 18
RELATED ARTICLES

Most Popular

Recent Comments

KNN City News
Home
E-Paper